BengaluruCinema

ರಾತ್ರಿ 10 ಗಂಟೆವರೆಗೂ ನಡೆದ ಸಂಧಾನ ಸಭೆ; ಒಮ್ಮತಕ್ಕೆ ಬಾರದ ಸುದೀಪ್‌, ಕುಮಾರ್‌..!

ಬೆಂಗಳೂರು; ನಟ ಕಿಚ್ಚ ಸುದೀಪ್‌ ಹಾಗೂ ನಿರ್ಮಾಪಕ ಕುಮಾರ್‌ ನಡುವಿನ ವಿವಾದ ಇನ್ನೂ ಬಗೆಹರಿದಿಲ್ಲ. ನಿನ್ನೆ ರವಿಚಂದ್ರನ್‌ ಮನೆಯಲ್ಲಿ ಸುದೀರ್ಘ ಸಂಧಾನ ಸಭೆ ನಡೆದರೂ ಒಮ್ಮತಕ್ಕೆ ಬರಲಾಗಿಲ್ಲ. ಬೆಂಗಳೂರಿನ ಹೊಸಕೆರೆಹಳ್ಳಿಯ ರವಿಚಂದ್ರನ್‌ ನಿವಾಸದಲ್ಲಿ ರಾತ್ರಿ ಹತ್ತು ಗಂಟೆಯವರೆಗೂ ಸಂಧಾನ ಸಭೆ ನಡೆದಿದೆ. ಆದ್ರೆ, ಇದರಲ್ಲಿ ಇಬ್ಬರೂ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ ಇವತ್ತೂ ಕೂಡಾ ಸಂಧಾನ ನಡೆಯುವ ಸಾಧ್ಯತೆ ಇದೆ.

ನಿನ್ನೆಯ ಸಭೆಯಲ್ಲಿ ರಾಕ್‌ಲೈನ್‌ ವೆಂಕಟೇಶ್‌, ಭಾ.ಮಾ.ಹರೀಶ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಆದ್ರೆ ನಿನ್ನೆ ಶಿವರಾಜ್‌ಕುಮಾರ್‌ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ. ಇಂದು ಶಿವರಾಜ್‌ ಕುಮಾರ್‌ ಅವರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದುಬಂದಿದೆ.

Share Post