ಅಕ್ರಮ ಹಣ ವರ್ಗಾವಣೆ ಆರೋಪ; ಮಹಾ ಸಚಿವನ ಆಸ್ತಿ ಮುಟ್ಟುಗೋಲು
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಘಿರುವ ಮಹಾರಾಷ್ಟ್ರ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಹಲವು ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ನವಾಬ್ ಮಲಿಕ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮಲಿಕ್ ಇನ್‌ಫ್ರಾಸ್ಟ್ರಕ್ಚರ್‌ಗೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ನವಾಬ್ ಮಲಿಕ್ ಅವರ ಜಪ್ತಿಮಾಡಲಾದ ಆಸ್ತಿಗಳಲ್ಲಿ ಗೋವಾಲಾ ಕಾಂಪೌಂಡ್ ಮತ್ತು ಮುಂಬೈನ ಉಪನಗರ ಕುರ್ಲಾ(ಪಶ್ಚಿಮ), ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿ 147.79 ಎಕರೆ ಕೃಷಿ ಭೂಮಿ, ಕುರ್ಲಾ(ಪಶ್ಚಿಮ) ದಲ್ಲಿ ಮೂರು ಫ್ಲಾಟ್ ಗಳು ಮತ್ತು ಬಾಂದ್ರಾ(ಪಶ್ಚಿಮ)ದಲ್ಲಿ ಎರಡು ವಸತಿ ಫ್ಲಾಟ್ ಗಳು ಸೇರಿವೆ.