ಬೆಂಗಳೂರು ಕರಗಕ್ಕೆ ಸಕಲ ಸಿದ್ಧತೆ; ದೇಗುಲಕ್ಕೆ ಮುಸ್ಲಿಂ ಧರ್ಮಗುರುಗಳ ಭೇಟಿ
ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗಕ್ಕೆ ಉತ್ಸವ ಮೆರವಣಿಗೆ ಸಿದ್ಧತೆಗಳು ಶುರುವಾಗುತ್ತಿವೆ. ಇನ್ನು ಕರಗ ಉತ್ಸವ ತಾಯಿಯ ಮೆರವಣಿಗೆ ವೇಳೆ ಪ್ರತಿ ವರ್ಷವೂ ತಾಯಿಯನ್ನು ದರ್ಗಾಗೆ ಕರೆದುಕೊಂಡು ಹೋಗಲಾಗುತ್ತೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಈ ಆಚರಣೆಗೆ ಸಮಸ್ಯೆ ಆಗುವ ಭೀತಿ ಇತ್ತು. ಆದ್ರೆ, ಮುಸ್ಲಿಂ ಧರ್ಮಗುರುಗಳು ಕರಗ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಹಿಜಾಬ್, ಹಲಾಲ್ ವಿವಾದ ಹಿನ್ನೆಲೆಯಲ್ಲಿ ಮಸ್ತಾನ್ ಸಾಬ್ ದರ್ಗಾ ಧರ್ಮಗುರುಗಳು ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರಗ ಉತ್ಸವ ತಾಯಿಯ ಮೆರವಣಿಗೆ ಪ್ರತಿ ವರ್ಷದಂತೆ ನಡೆಯಲಿ. ಮಸ್ತಾನ್ ಸಾಬ್ ದರ್ಗಾಕ್ಕೆ ತಾಯಿ ಆಗಮಿಸಲಿ ಎಂದು ಮನವಿ ಮಾಡಿದ್ದಾರೆ. ಬಳೇಪೇಟೆ ಬಳಿ ಮಸ್ತಾನ್ ಸಾಬ್ ದರ್ಗಾ ಮುಂದೆ ಮೆರವಣಿಗೆ ಬರಲಿ. ಮುಸ್ಲಿಂ ಸಮುದಾಯದ ಸಹಕಾರ, ಪ್ರೀತಿ ಇರುತ್ತೆ. ನಮ್ಮ ಪೂರ್ವಿಕರ ಕಾಲದಿಂದ ನಡೆದುಬಂದ ರೀತಿ ಜರುಗಲಿ ಎಂದು ಮನವಿ ಮಾಡಿದ್ದಾರೆ.