Bengaluru

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಬೇಸಿಗೆ ಶುರುವಿನಲ್ಲೇ ಹೀಗಾದರೆ ಗತಿ ಏನು..?

ಬೆಂಗಳೂರು; ಇನ್ನೂ ಬೇಸಿಗೆ ಕಾಲ ಶುರುವಾಗಿದೆ ಅಷ್ಟೇ. ಆಗಲೇ ಎಂದೂ ಇಲ್ಲದ ರೀತಿಯಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು, ಬೆಂಗಳೂರಿನ ಪ್ರಮುಖ ಬಡಾವಣೆಗಳ ಜನ ಸರಿಯಾಗಿ ನೀರು ಪೂರೈಕೆಯಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಸಿಗೆಯ ಶುರುವಿನಲ್ಲೇ ಈ ರೀತಿಯ ನೀರಿನ ಸಮಸ್ಯೆ ಉಂಟಾದರೆ, ಮುಂದಿನ ದಿನಗಳ ಗತಿ ಏನು ಎಂಬ ಚಿಂತೆ ಶುರುವಾಗಿದೆ.

ಮಳೆಯ ಕೊರತೆ, ಅಂತರ್ಜಲ ಮಟ್ಟ ಕುಸಿತ;

ಮಳೆಯ ಕೊರತೆ, ಅಂತರ್ಜಲ ಮಟ್ಟ ಕುಸಿತ; ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಇದರಿಂದಾಗಿ ಈ ಬಾರಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇನ್ನೊಂದೆಡೆ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್‌ವೆಲ್‌ ಗಳು ಬತತಿಹೋಗುತ್ತಿವೆ. ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ 7 ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿಹೋಗಿವೆ ಎಂದು ಹೇಳಲಾಗುತ್ತಿದೆ. ಇನ್ನು ಅಸಮರ್ಪಕ ಮೂಲಸೌಕರ್ಯದಿಂದಾಗಿಯೂ ಜನ ಈ ಬಾರಿ ತೀವ್ರವಾಗಿ ನೀರಿನ ಸಂಕಷ್ಟ ಎದುರಿಸುತ್ತಿದ್ದಾರೆ.

ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡಾ ನೀರಿಲ್ಲ;

ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡಾ ನೀರಿಲ್ಲ; ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.. ಬೋರ್‌ವೆಲ್‌ಗಳು ಬತ್ತಿಹೋಗಿರುವುದರಿಂದ ನೀರು ಪೂರೈಕೆ ಕಷ್ಟವಾಗುತ್ತಿದೆ. ಇನ್ನೊಂದೆಡೆ, ಬೆಂಗಳೂರಿನ ಬಹುತೇಕ ಭಾಗಕ್ಕೆ ಕಾವೇರಿ ನೀರು ಪೂರೈಕೆಯಾಗುತ್ತಿದೆ.. ಆದ್ರೆ ಈ ಬಾರಿ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗಿದೆ. ಹೀಗಾಗಿ, ಹೆಚ್ಚಿನ ನೀರನ್ನು ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಈ ಎಲ್ಲಾ ಕಾರಣದಿಂದ ಕೆಲವೊಂದು ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡಾ ಜನರಿಗೆ ನೀರು ಸಿಗದಂತಾಗಿದೆ..

ಅಪಾರ್ಟ್‌ಮೆಂಟ್‌ಗಳು ನೀರಿನ ಸಮಸ್ಯೆ ತೀವ್ರ;

ಅಪಾರ್ಟ್‌ಮೆಂಟ್‌ಗಳು ನೀರಿನ ಸಮಸ್ಯೆ ತೀವ್ರ; ಅಪಾರ್ಟ್‌ಮೆಂಟ್‌ಗಳಲ್ಲಿ ನೂರಾರು ಮನೆಗಳಿರುತ್ತವೆ. ಈ ಅಪಾರ್ಟ್‌ಮೆಂಟ್‌ನ ಜನ ಬೋರ್‌ವೆಲ್‌ ನೀರನ್ನೇ ನಂಬಿದ್ದಾರೆ. ಆದ್ರೆ ಅಂತರ್ಜಲ ಕಡಿಮೆಯಾಗಿದ್ದರಿಂದ ಬೋರ್‌ವೆಲ್‌ಗಳು ಬತ್ತಿಹೋಗುತ್ತಿವೆ. ಹೀಗಾಗಿ ಅಪಾರ್ಟ್‌ಮೆಂಟ್‌ಗಳಲ್ಲೂ ನೀರಿನ ಕೊರೆತ ಉಂಟಾಗುತ್ತಿದೆ.

ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ;

ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ; ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಬರಗಾಲ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿಗಳಲ್ಲಿನ ನೀರಿನ ಸಂಗ್ರಹ ಕುಸಿದಿದೆ. ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಸಲಾಶಯಗಳ ಒಟ್ಟು ಸಾಮರ್ಥ್ಯದ ಶೇಕಡಾ 39 ರಷ್ಟು ಮಾತ್ರವೇ ನೀರಿದೆ.  114.57 ಟಿಎಂಸಿ ಒಟ್ಟು ಸಾಮರ್ಥ್ಯವಾರದರೆ,  ಪ್ರಸ್ತುತ ಈ ಜಲಾಶಯಗಳು 44.65 ಟಿಎಂಸಿ ನೀರು ಮಾತ್ರ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಈ ಜಲಾಶಯಗಳಲ್ಲಿ ಸುಮಾರು 64.61 ಟಿಎಂಸಿ ನೀರು ಇತ್ತು ಎಂಬುದನ್ನು ಗಮನಿಸಬೇಕಿದೆ.

ಒಂದು ಟ್ಯಾಂಕರ್‌ ನೀರು 3 ಸಾವಿರ ರೂಪಾಯಿ;

ಒಂದು ಟ್ಯಾಂಕರ್‌ ನೀರು 3 ಸಾವಿರ ರೂಪಾಯಿ; ಇನ್ನು ನೀರಿನ ಸಮಸ್ಯೆ ತಲೆದೋರುತ್ತಿದ್ದಂತೆ ಟ್ಯಾಂಕರ್‌ ಮೂಲಕ ನೀರು ಸಪ್ಲೈ ಮಾಡುವವರ ಹಾವಳಿ ಜಾಸ್ತಿಯಾಗಿದೆ. ಮೊದಲಿಗೆ ಒಂದು ಸಾವಿರದಿಂದ ಒಂದೂವರೆ ಸಾವಿರ ರೂಪಾಯಿ ಇದ್ದ ಟ್ಯಾಂಕರ್‌ ನೀರಿನ ದರ ಈಗ 3 ಸಾವಿರ ರೂಪಾಯಿ ಆಗಿದೆ. ಹೀಗಾಗಿ, ಈ ಹಾವಳಿ ತಪ್ಪಿಸಲು ಸರ್ಕಾರ ಮುಂದಾಗಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವವರು ನೋಂದಣಿ ಮಾಡಿಕೊಳ್ಳಬೇಕೆಂದು ಸೂಚನೆ ಕೊಟ್ಟಿದೆ.

 

Share Post