ಧ್ವನಿವರ್ದಕ ಬಳಕೆ ವಿಚಾರ; ಶಬ್ದದ ಮಟ್ಟ ಪರಿಶೀಲಿಸಲು ಪೊಲೀಸ್ ಠಾಣೆಗಳಿಗೆ ನೋಟಿಸ್
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಸಂಸ್ಥೆಗಳು, ಪಬ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಧ್ವನಿವರ್ದಕ ಸೇರಿ ಶಬ್ದ ಹೊರಸೂಸುವ ಉಪಕರಣಗಳ ಶಬ್ದದ ಮಟ್ಟವನ್ನು ಪರಿಶೀಲಿಸಬೇಕೆಂದು ಎಲ್ಲಾ ಪೊಲೀಸ್ ಠಾಣೆಗಳಿಗೂ ಡಿಜಿಪಿ ನೋಟಿಸ್ ನೀಡಿದ್ದಾರೆ. ಕೋರ್ಟ್ ಅದೇಶದಂತೆ ಶಬ್ದ ಮಟ್ಟ ಇದೆಯೋ, ಇಲ್ಲವೋ ಎಂದು ಪರಿಶೀಲಿಸುವಂತೆ ಅವರು ಸೂಚನೆ ಕೊಟ್ಟಿದ್ದಾರೆ.
ಕೋರ್ಟ್ ಆದೇಶ ಉಲ್ಲಂಘನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಬೇಕೆಂದು ವಿವಿಧ ಬಲಪಂಥೀಯ ಸಂಘಟನೆಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.