ಗಂಡಸ್ತನ ಪದಬಳಕೆಗೆ ಹೆಚ್ಡಿಕೆ ವಿಷಾದ: ಸರ್ಕಾರಕ್ಕೆ ಒಂದು ತಿಂಗಳ ಡೆಡ್ಲೈನ್ ನೀಡಿದ ಮಾಜಿ ಸಿಎಂ
ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಹಾಗೂ ಹಿಂದೂ ಸಮುದಾಯಗಳ ನಡುವೆ ಕಾಡ್ಗಿಚ್ಚು ಹತ್ತಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಳಾಗುತ್ತಿರುವ ನಿಟ್ಟಿನಲ್ಲಿ ಇಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು. ವಿಷಾದಕ್ಕೂ ಮುನ್ನ ಗಂಡಸ್ತನ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಸುಖ ಸಂಸಾರಕ್ಕೆ 12 ಸೂತ್ರ ಅಂತ ನಾವು ನೋಡಿದ್ವಿ. ಹಿಂದೂ ಸಮಾಜಕ್ಕೆ 24 ಟಾಸ್ಕ್ಗಳನ್ನು ಕೊಟ್ಟಿದ್ರು. ವಾಟ್ಸಾಪ್ ಸಂದೇಶಗಳನ್ನು ನೋಡಿದ್ರೆ ರೋಷ ಬರಲ್ವಾ..? ಪ್ರಾರಂಬಿಕ ಹಂತದಲ್ಲೇ ಇದನ್ನು ಚಿವುಟಿ ಹಾಕಬೇಕಿತ್ತು. ಇಲ್ಲಿವರೆಗೂ ಬೆಳೆಯಲು ಬಿಟ್ಟಿದ್ದೇ ದೊಡ್ಡ ತಪ್ಪು. ಇದು ಕರಾವಳಿ, ಮಲೆನಾಡು, ಉಡುಪಿ, ಮಂಗಳೂರಿನಲ್ಲಿ ಶುರುವಾಗಿ ಇಡೀ ರಾಜ್ಯಕ್ಕೆ ಹಬ್ಬಿದೆ. ಇದಕ್ಕೆ ಹೊಣೆ ಯಾರು ಹಾಗಾಗಿ ಈ ಮಾತನ್ನು ಆಡಿದ್ದೇನೆ. ಮಾತನಾಡುವ ಭರದಲ್ಲಿ ಗಂಡಸ್ತನದ ಕುರಿತು ಹೇಳಿದ್ದೇನೆ. ಕೂಡಲೇ ಅದನ್ನು ಸರಿಮಾಡಿಕೊಂಡಿದ್ದೇನೆ. ನನ್ನ ಪದಬಳಕೆ ನೋವು ತಂದಿದ್ರೆ, ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ರು.
ಸರ್ಕಾರಕ್ಕೆ ಒಂದು ತಿಂಗಳ ಗಡುವು
ಸಮಾಜ ಒಡೆಯಲು ಘಾತುಕ ಶಕ್ತಿಗಳು ತಮ್ಮ ಪರಾಕ್ರಮ ತೋರುತ್ತಿವೆ. ಇವರನನು ನಿಯಂತ್ರಸದೆ ಇದ್ದರೆ ಕೆಟ್ಟ ದಿನಗಳನ್ನು ನಾವು ಎದುರು ನೋಡಬೇಕಾಗುತ್ತದೆ. ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡುತ್ತೇನೆ. ಅಷ್ಟರಲ್ಲಿ ಸಮಾಜ ಒಡೆಯಲು ಪ್ರಯತ್ನಿಸುತ್ತಿರುವವರನ್ನು ತಡೆಯಬೇಕು ಇಲ್ಲದಿದ್ದರೆ ನಾಡಿನಲ್ಲಿ ಶಾಂತಿ ನೆಲೆಸಲು ಪಾದಯಾತ್ರೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ರು. ರೈತರು, ಅಮಾಯಕರು ಗ್ರಾಮಗಳ ಅಮಾಯಕ ಜನರ ರಕ್ಷಣೆ ಮಾಡಲು ನಾನು ಪಾದಯಾತ್ರೆ ನಡೆಸುತ್ತೇನೆ ಎಂದರು.