ಟರ್ಕಿಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿ: ಯುದ್ಧಕ್ಕೆ ಫುಲ್ ಸ್ಟಾಪ್ ಹಾಕಲು ಸಿದ್ಧತೆ
ಟರ್ಕಿ: ಉಕ್ರೇನ್ ಮತ್ತು ರಷ್ಯಾ ನಡುವೆ ಕಳೆದ ಒಂದು ತಿಂಗಳಿಂದ ನಡೆದ ಯುದ್ಧ ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ ಎನ್ನಲಾಗ್ತಿದೆ. ಇಲ್ಲಿಯವರೆಗೆ ನೀನಾ..ನಾನಾ ಎಂದು ಯುದ್ಧ ನಡೆಸಿದ್ದ ಉಭಯ ದೇಶಗಳು ರಾಜಿ ಸಂಧಾನದಲ್ಲಿ ಮುನ್ನಡೆದಿವೆ. ಅಂತಾರಾಷ್ಟ್ರೀಯವಾಗಿ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಒಂದು ಹೆಜ್ಜೆ ಹಿಂದೆ ಸರಿದಿದ್ದು, ಉಕ್ರೇನ್ ರಾಜಧಾನಿ ಕೀವ್ ಉತ್ತರ ನಗರವಾದ ಚೆರ್ನಿವ್ಟ್ಸಿ ಬಳಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ರಷ್ಯಾ ಒಪ್ಪಿಕೊಂಡಿದೆ.
ಇದಕ್ಕೆ ಮುಖ್ಯ ಕಾರಣ ರಷ್ಯಾ ಬೇಡಿಕೆಗಳನ್ನು ಉಕ್ರೇನ್ ಒಪ್ಪಿಕೊಂಡಿರುವುದು. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ನಡುವೆ 3 ಗಂಟೆಗಳ ಕಾಲ ಮಾತುಕತೆ ನಡೆಯಿತು. ಕೀವ್ ಮತ್ತು ಚೆರ್ನಿವ್ಟ್ಸಿ ಸಮೀಪದಿಂದ ರಷ್ಯಾದ ಸೈನ್ಯವನ್ನು ರಷ್ಯಾ ವಾಪಸ್ ಕರೆಸಿಕೊಳ್ಳುತ್ತಿರುವುದನ್ನು ಗಮನಿಸಿರುವುದಾಗಿ ಉಕ್ರೇನಿಯನ್ ಮಿಲಿಟರಿ ಹೇಳಿದೆ. ಅಂತರರಾಷ್ಟ್ರೀಯ ಶಾಂತಿ ಒಪ್ಪಂದವನ್ನು ಮುಕ್ತಾಯಗೊಳಿಸುವ ಸಾಧ್ಯತೆಯ ಬಗ್ಗೆ ಉಭಯ ದೇಶಗಳು ಚರ್ಚಿಸಿದವು.
ಸೈನ್ಯವನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ಉಕ್ರೇನ್‌ನ ಭದ್ರತಾ ವ್ಯವಸ್ಥೆ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದೆ. ನ್ಯಾಟೋದಲ್ಲಿ ಉಕ್ರೇನ್ ತಟಸ್ಥವಾಗಿರಬೇಕೆಂಬ ರಷ್ಯಾ ಒತ್ತಾಯಕ್ಕೆ ಉಕ್ರೇನ್ ಮಣಿದಿದೆ. ಮಾತುಕತೆಯ ಸಮಯದಲ್ಲಿ ಉಕ್ರೇನ್ ತನ್ನ ನಿರ್ಧಾರವನ್ನು ಪ್ರಕಟಿಸಲು ಸಿದ್ಧವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಡಾನ್‌ಬಾಸ್ ಪ್ರದೇಶದಲ್ಲಿ ಕೂಡಾ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಎರಡೂ ಕಡೆಯವರು ಕಂಡೀಷನ್‌ಗಳಿಗೆ ಒಪ್ಪಿರುವುದರಿಂದ ಯುದ್ಧ ಅರ್ಧ ಮುಗಿದಿದೆ ಎಂದು ರಷ್ಯಾದ ವಕ್ತಾರರು ಹೇಳಿದ್ದಾರೆ. ಒಪ್ಪಂದವು ಅಂತಿಮಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಇಸ್ತಾಂಬುಲ್ ಮಾತುಕತೆಯ ಯಶಸ್ಸಿನ ನಂತರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಉಕ್ರೇನ್ ಅಧ್ಯಕ್ಷ ಝೆಲೆಜ್ನಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಉಭಯ ಅಧ್ಯಕ್ಷರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಕ್ರೆಮ್ಲಿನ್ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ರಾಜಿ ಮಾಡಿಕೊಳ್ಳಲು ಸಿದ್ಧ ಎಂದು ಟರ್ಕಿ ಹೇಳಿದೆ. ಉಕ್ರೇನ್ ನ್ಯಾಟೋಗೆ ಸೇರುವ ಭರವಸೆಯನ್ನು ಬಿಟ್ಟುಕೊಡಬೇಕೆಂದು ರಷ್ಯಾ ಯಾವಾಗಲೂ ಒತ್ತಾಯಿಸುತ್ತದೆ, ಉಕ್ರೇನ್ ತನ್ನ ತಟಸ್ಥತೆಯನ್ನು ಘೋಷಿಸಲು ಸಿದ್ಧವಾಗಿದೆ. ಒಪ್ಪಂದದ ಭಾಗವಾಗಿ ದೇಶಕ್ಕೆ ತನ್ನದೇ ಆದ ಭದ್ರತಾ ಖಾತರಿಗಳು ಬೇಕಾಗುತ್ತವೆ ಇದಕ್ಕೆ ಸಿದ್ಧ ಎಂದು ಝೆಲೆನ್ಸ್ಕಿ ಸೂಚಿಸಿದರು.
ಮತ್ತೊಂದೆಡೆ, ದಕ್ಷಿಣದ ಮೂರು ನಗರಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುವುದಾಗಿ ಉಕ್ರೇನ್ ಹೇಳಿದೆ. ಉಪ ಪ್ರಧಾನ ಮಂತ್ರಿ ಐರಿನಾ ವೆರೆಶ್‌ಚುಕ್ ಅವರು ಎನರ್‌ಹೋಡರ್ ಮತ್ತು ಮೆಲಿಟೊಪೋಲ್‌ನಿಂದ ಹೆಚ್ಚು ಬಾಂಬ್ ದಾಳಿಗೊಳಗಾದ ಮರಿಯುಪೋಲ್‌ನಿಂದ ಮಾನವೀಯ ಕಾರಿಡಾರ್‌ಗಳು ತೆರೆಯಲಿವೆ ಎಂದು ಹೇಳಿದರು. ಪ್ರಸ್ತುತ ಎರಡು ನಗರಗಳು ರಷ್ಯಾದ ನಿಯಂತ್ರಣದಲ್ಲಿವೆ. ಯಾವುದೇ ಒಪ್ಪಂದವಿಲ್ಲದೆ 880 ಜನರು ಮರಿಯುಪೋಲ್‌ನಿಂದ ಒಂದು ದಿನ ಮುಂಚಿತವಾಗಿ ತೊರೆದಿದ್ದಾರೆ ಎಂದು ಉಪ ಪ್ರಧಾನ ಮಂತ್ರಿ ಐರಿನಾ ವರೆಶ್ಚುಕ್ ಹೇಳಿದರು.