CrimeInternationalUncategorized

13ವರ್ಷದ ಬಾಲಕನ ಪುಂಡಾಟಕ್ಕೆ ಒಂಭತ್ತು ಜನ ಬಲಿ..!

ಅಮೆರಿಕಾ: ಟೆಕ್ಸಾಸ್‌ನಲ್ಲಿ 13 ವರ್ಷದ ಬಾಲಕನೊಬ್ಬನ ಪುಂಡಾಟಕ್ಕೆ  ಒಂಬತ್ತು ಜೀವಗಳನ್ನು ಬಲಿಯಾದ ಘಟನೆ ನಡೆದಿದೆ. ವಯಸ್ಸಲ್ಲದ ವಯಸ್ಸಲ್ಲಿ ದೊಡ್ಡ ಟ್ರಕ್‌ ಅನ್ನು ಓಡಿಸಲು ಮುಂದಾಗಿದ್ದಾನೆ. ಈ ವೇಲೆ ಅ ಬಾಲಕನ ತಂದೆ ಕೂಡ ಪಕ್ಕದಲ್ಲೇ ಇದ್ದಾರೆ. ಆದರೂ ಟ್ರಕ್‌ ನಿಯಂತ್ರಿಸಲು ಸಾಧ್ಯವಾಗದೆ ಬಾಲಕ ಮತ್ತವನ   ತಂದೆ ಸೇರಿದಂತೆ ಇತರ ಒಂಬತ್ತು ಜನರ ಪ್ರಾಣ ಪಕ್ಷಿ ಹಾರಿಹೋದ ದಾರುಣ ಘಟನೆ ನಡೆದಿದೆ.

13 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಟ್ರಕ್  ಓಡಿಸುವಾಗ. ಇದ್ದಕ್ಕಿದ್ದಂತೆ ಇನ್ನೊಂದು ವ್ಯಾನ್ ಎದುರಿಗೆ ಬಂದಿದೆ. ಕೂಡಲೇ ಹುಡುಗನಿಗೆ ತನ್ನ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಗ ಎದುರಿಗೆ ಬರುತ್ತಿದ್ದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬೆನ್ನಲ್ಲೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ನ್ಯೂ ಮೆಕ್ಸಿಕೋದ ಯೂನಿವರ್ಸಿಟಿ ಆಫ್ ಸೌತ್‌ವೆಸ್ಟ್ ಗಾಲ್ಫ್ ತಂಡದ ಆರು ಮಂದಿ ಸದಸ್ಯರು ಎಂದು ಪೊಲೀಸರು ಗುರುತಿಸಿದ್ದಾರೆ.

ಪಕ್ಕದಲ್ಲಿದ್ದ ತಂದೆಯೊಂದಿಗೆ ವಾಹನ ಚಲಾಯಿಸುತ್ತಿದ್ದ ಬಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿರುವ ಇತರ ಇಬ್ಬರು ಸೌತ್‌ವೆಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಇಬ್ಬರು ಕೆನಡಿಯನ್ನರ ಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ವಾಹನಗಳು ವೇಗವಾಗಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನಗಳು ಡಿಕ್ಕಿ ಹೊಡೆದ ರಭಸಕ್ಕೆ ಟ್ರಕ್‌ನ ಟೈರ್‌ ಹಾರಿ ಹಾರಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Share Post