International

ರಷ್ಯಾ ಸೈನಿಕರ ಕರಾಳ ಮುಖ ಬಿಚ್ಚಿಟ್ಟ ಉಕ್ರೇನಿಯನ್‌ ಮಹಿಳೆ: ನನ್ನ ಗಂಡನನ್ನು ಕೊಂದು, ನನ್ನ ಮೇಲೆ ಅತ್ಯಾಚಾರ ಮಾಡಿದ್ರು..

ಉಕ್ರೇನ್: ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಮುಂದುವರೆಯುತ್ತಲೇ ಇದೆ. ಯುದ್ಧ ನಿಲ್ಲಿಸುವಂತೆ ಒಂದು ಕಡೆ ಶಾಂತಿ ಮಾತುಕತೆ ನಡೆಸುತ್ತಿರುವುದಾಗಿ ಹೇಳುತ್ತಿರುವ ರಷ್ಯಾ ಮತ್ತೊಂದೆಡೆ ಯುದ್ಧವನ್ನು ಮುಂದುವರೆಸುತ್ತಲೇ ಇದೆ.  ಇದರ ಜೊತೆಗೆ ಉಕ್ರೇನ್‌ ಮಹಿಳೆಯರ ಮೇಲೆ ರಷ್ಯಾ ಸೇನೆ ಅಮಾನುಷವಾಗಿ ವರ್ತನೆ ಮಾಡುತ್ತಿರುವುದಾಗಿ ಮಾಹಿತಿ ಹರಿದಾಡುತ್ತಿವೆ.

ರಷ್ಯಾದ ಸೈನಿಕರು ಮಹಿಳೆಯರ ಮೇಲೆ ಅತ್ಯಾಚಾರವನ್ನೂ ಮಾಡ್ತಿದಾರೆ ಎಂದು ಉಕ್ರೇನಿಯನ್  ದೇಶದ ಸಂಸದೆ ಮರಿಯಾ ಮಾಜೆಂಟ್ಸೆವಾ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಾರ್ಚ್‌ 9ರಂದು ನಡೆದ ಘಟನೆಯನ್ನು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. ರಷ್ಯಾ ಸೈನಿಕರು ಮಹಿಳೆಯ ಮನೆ ಬಳಿ ಬಂದ ಚಪ್ಪಲಿ ಸದ್ದು ಕೇಳಿಸಿಕೊಡಿದ್ದಾರೆ. ನಂತರ ತಮ್ಮ ಮನೆಯ ಗೇಟ್‌ ಬಾಗಿಲನ್ನು ತೆರೆದಯ ಒಳಬೊಂದಿದ್ದಾರೆ. ಈ ವೇಳೆ ನಮ್ಮ ಮನೆಯ ಸಾಕು ನಾಯಿಗೆ ಗುಂಡಿಕ್ಕಿ ಕೊಂದಿದ್ದಾರೆ. ಶಬ್ದ ಕೇಳಿ ಆಚೆ ಹೋದ ನನ್ನ ಗಂಡನನ್ನೂ ರಷ್ಯಾ ಸೈನಿಕರು ಶೂಟ್‌ ಮಾಡಿದ್ದಾರೆ. ಶಬ್ದದಿಂದ ಬೆಚ್ಚಿ ಬಿದ್ದ ನನ್ನ ನಾಲ್ಕು ವರ್ಷದ ಮಗ ಜೋರಾಗಿ ಅಳಲು ಶುರು ಮಾಡಿದ್ದಾನೆ. ಅಳುವನ್ನು ಕೇಳಿಸಿಕೊಂಡು ಒಳಗೆ ಬಂದ ಸೈನಿಕರು ನನ್ನ ಹಣೆಗೆ ರಿವಾಲ್ವರ್‌ ಇಟ್ಟು ಬೆದರಿಸಿದ್ದಾರೆ. ಶಬ್ದ ಮಾಡಿದ್ರೆ ನಿನ್ನ ಮಗನನ್ನು ಕೊಲ್ಲುತ್ತೇನೆಂದು ಹೆದರಿಸಿ ನನ್ನ ಬಟ್ಟೆ ಕಳಚುವಂತೆ ಸೂಚಿಸಿದ್ರು. ಬಳಿಕ ಬಬ್ಬರ ನಂತರ ಒಬ್ಬರು ನನ್ನ ಮೇಲೆ ಅತ್ಯಾಚಾರ ಮಾಡಿದ್ರು ಎಂದು ಸಂತ್ರಸ್ತ ಮಹಿಳೆ ನೋವನ್ನು ತೋಡಿಕೊಂಡಿದ್ದಾರಂತೆ

ಈ ವೇಳೆ ಬಾಯ್ಲರ್ ಕೊಠಡಿಯಲ್ಲಿ ಅಳುತ್ತಿದ್ದ ತನ್ನ ನಾಲ್ಕು ವರ್ಷದ ಮಗನನ್ನು ನೆನೆದು ಸಂತ್ರಸ್ತ ಮಹಿಳೆ ಕಣ್ಣೀರು ಹಾಕಿದ್ದಾರೆ ಎಂದು ಸಂಸದರು ವಿವರಿಸಿದರು. ನಿನ್ನ ಪತಿ ನಾಜಿಯಾದ್ದರಿಂದ ನಾವು ಕೊಲೆ ಮಾಡಿದ್ದೇವೆ. ಈಗ ನಿನ್ನನ್ನು ಕೊಲ್ಲಬೇಕೆ..ಅಥವಾ ಬಿಡಬೇಕೆ..? ಎಂದು ವ್ಯಂಗ್ಯವಾಡಿದ್ರಂತೆ. ಬಳಿಕ ರಷ್ಯಾ ಸೈನಿಕರ ಅಲ್ಲಿಂದ ತೆರಳಿದ ಕೂಡಲೇ ಗಂಡನ ಶವವನ್ನೂ ಅಲ್ಲೇ ಬಿಟ್ಟು ಮಹಿಳೆ ಭಯದಿಂದ ಮಗನ ಜೊತೆ ಸ್ಥಳದಿಂದ ಬೇರೆ ಕಡೆ ಹೋಗಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಅತ್ಯಾಚಾರ ದೂರು ದಾಖಲೆಯ ಬಗೆಗೆ ತನಿಖೆ ನಡೆಸುತ್ತಿದ್ದಾರೆ.

Share Post