ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ: 18ಗಂಟೆಗಳ ಕಾಲ ಲಾಕರ್ ರೂಂನಲ್ಲಿ ವೃದ್ಧ ಲಾಕ್
ಜೂಬ್ಲಿ ಹಿಲ್ಸ್: ಜ್ಯೂಬ್ಲಿಹಿಲ್ಸ್ ಯೂನಿಯನ್ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವೃದ್ಧರೊಬ್ಬರು ರಾತ್ರಿಯಿಡೀ ಬ್ಯಾಂಕ್ ಲಾಕರ್ ರೂಂನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ಲಾಕರ್‌ಗಾಗಿ ಬಂದ ಗ್ರಾಹಕರೊಬ್ಬರನ್ನು ಬ್ಯಾಂಕ್ ನಲ್ಲೇ ಇರಿಸಿಕೊಂಡು ಬ್ಯಾಂಕ್ ಸಿಬ್ಬಂದಿ ಬೀಗ ಜಡಿದಿದ್ದಾರೆ. ಕೃಷ್ಣಾರೆಡ್ಡಿ ಜೂಬ್ಲಿಹಿಲ್ಸ್ ರಸ್ತೆ ಸಂಖ್ಯೆ 67ರ ನಿವಾಸಿಯಾಗಿದ್ದಾರೆ.
ಕೃಷ್ಣಾರೆಡ್ಡಿ ಅವರು ಸೋಮವಾರ ಸಂಜೆ 4 ಗಂಟೆಗೆ ಜುಬ್ಲಿ ಹಿಲ್ಸ್ ಚೆಕ್ ಪೋಸ್ಟ್ ನಲ್ಲಿರುವ ಯೂನಿಯನ್ ಬ್ಯಾಂಕ್ ಗೆ ಲಾಕರ್ ರೂಂನಲ್ಲಿ ಕೆಲಸವಿದೆ ಎಂದು ಸಿಬ್ಬಂದಿಗೆ ತಿಳಿಸಿ ಒಳಗೆ ಹೋಗಿದ್ದಾರೆ. ಲಾಕರ್ ಕೋಣೆಗೆ ಹೋದ ನಂತರ ಸಿಬ್ಬಂದಿ ಅದನ್ನು ಗಮನಿಸದೆ ಲಾಕರ್ ರೂಂಗೆ ಬೀಗ ಹಾಕಿದ್ದಾರೆ. ರೂಂ ಲಾಕ್ ಅದ ಕಾರಣ ಕೃಷ್ಣಾರೆಡ್ಡಿ ರಾತ್ರಿಯಿಡೀ ಅಲ್ಲಿಯೇ ಇರಬೇಕಾಯಿತು. ಕೃಷ್ಣಾರೆಡ್ಡಿ ಮನೆಗೆ ಬಾರದಿರುವುದನ್ನು ಕಂಡು ಕುಟುಂಬಸ್ಥರು ಕಂಗಾಲಾಗಿದ್ದರು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಅನುಮಾನಗೊಂಡ ಪೊಲೀಸರು ಮಂಗಳವಾರ ಬೆಳಗ್ಗೆ ಬ್ಯಾಂಕ್‌ಗೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬ್ಯಾಂಕ್‌ನ ಲಾಕರ್ ಕೋಣೆಯಲ್ಲಿ ಕೃಷ್ಣಾರೆಡ್ಡಿ ಇರುವುದು ಪತ್ತೆಯಾಗಿದೆ. ಅಷ್ಟು ಹೊತ್ತಿಗಾಗಲೇ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ವೃದ್ದನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.