ನಲಪಾಡ್ ಮಾಲೀಕತ್ವದ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ..!
ಮೈಸೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮಾಲೀಕತ್ವದ ಮೈಸೂರಿನ ನಲಪಾಡ್ ಹೋಟೆಲ್‌ನಲ್ಲಿ ಯುವತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಮೈಸೂರಿನ ಹೈವೆ ಸರ್ಕಲ್ ನಲ್ಲಿರುವ ನಲಪಾಡ್ ಹೋಟೆಲ್ ನಲ್ಲಿ ಕೃತಿಕಾ ಗೌಡ ಎಂಬ ಯುವತಿ 20 ಲಕ್ಷ ಕೊಟ್ಟು ಲೀಸ್ ನಲ್ಲಿ ರೆಸ್ಟೋರೆಂಡ್ ನಡೆಸುತ್ತಿದ್ದರು. ಇದಕ್ಕೆ ಕಸ್ತೂರಿ ರೆಸ್ಟೋರೆಂಟ್ ಎಂಬ ಹೆಸರಿಡಲಾಗಿತ್ತು. ಆದ್ರೆ ಲೀಸ್‌ಗೆ ಪಡೆದು ಇನ್ನೂ ಒಂದು ವರ್ಷ ಕೂಡಾ ಮುಗಿದಿಲ್ಲ. ಆಗಲೇ ರೆಸ್ಟೋರೆಂಟ್ ಖಾಲಿ ಮಾಡುವಂತೆ ಧಮಕಿ ಹಾಕಲಾಗುತ್ತಿದೆಯಂತೆ.
ಮೈಸೂರಿನಲ್ಲಿ ನಲಪಾಡ್ ಹೋಟೆಲ್ ನೋಡಿಕೊಳ್ಳುತ್ತಿರುವ ಸಯ್ಯದ್ ರಿಯಾಜ್ ಎಂಬಾತ ರೆಸ್ಟೋರೆಂಟ್ ಖಾಲಿ ಮಾಡುವಂತೆ ಕೃತಿಕಾ ಗೌಡಗೆ ಧಮಕಿ ಹಾಕಿದ್ದಾರೆ. ಜೊತೆಗೆ ಆಕೆಯನ್ನು ಎಳೆದಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.