ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕಾರ
ಗೋವಾ: ಗೋವಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಎರಡನೇ ಬಾರಿಗೆ ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗಿ ಪ್ರಮಾನವಚನ ಸ್ವೀಕಾರ ಮಾಡಿದ್ದು, ಇವರ ಜೊತೆ ಎಂಟು ಮಂದಿ ಶಾಸಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿಶ್ವನಾಥ್ ರಾಣೆ, ಮೊವಿನ್ ಗೊಡಿನೊ, ರವಿ ನಾಯ್ಕ, ನೀಲೇಶ್ ಕ್ಯಾಬ್ರಲ್, ಸುಭಾಷ್ ಶಿರೋಡ್ಕರ್, ರೋಹನ್ ಖಾಂಟೆ, ಗೋವಿಂದ್ ಗಾಡೆ ಮತ್ತು ಅಟಾನಾಸಿಯೋ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಹಾಜರಿದ್ದರು. ಪ್ರಮೋದ್ ಸಂಪುಟದ ನೂತನ ಸಚಿವರಿಗೆ ಶುಭ ಕೋರಿದರು.