National

ಮೊಬೈಲ್‌ ಕೊಡಿಸದಿದ್ದಕ್ಕೆ ಆಕ್ರೋಶ; ಹೆತ್ತ ತಾಯಿಯನ್ನೇ ಕೊಂದ ಪಾಪಿ..!

ಹೈದರಾಬಾದ್‌: ಮೊಬೈಲ್‌ ಕೊಡಿಸಲಿಲ್ಲ ಎಂದು ಆಕ್ರೋಶಗೊಂಡ ದುಷ್ಟ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಜೋಗುಲಾಂಬ ಗದ್ವಾಲ್‌ ಜಿಲ್ಲೆ ಉಂಡಪಲ್ಲಿ ಮಂಡಲ್‌ ಶೇರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮಹೇಶ್‌ ಎಂಬಾತನೇ ತನ್ನ ತಾಯಿಯನ್ನು ಹತ್ಯೆ ಮಾಡಿದಾತ. ಸಹೋದರಿ ಲಕ್ಷ್ಮೀ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶೇರಿಪಲ್ಲಿ ಗ್ರಾಮದ ಲಕ್ಷ್ಮೀ ಹಾಗೂ ವೆಂಕಟೇಶ್ವರಲು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಮೊದಲನೆಯವನೇ ಮಹೇಶ್‌. ಪಿಯುಸಿ ಓದಿರುವ ಆತ ತಾಯಿಯ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇತ್ತೀಚೆಗೆ ಆತನಿಗೆ ಸ್ಮಾರ್ಟ್‌ ಫೋನ್‌ ತೆಗೆದುಕೊಳ್ಳಬೇಕೆಂಬ ಆಸೆ ಹುಟ್ಟಿತ್ತು. ಅದಕ್ಕಾಗಿ ತಾಯಿಯನ್ನು ದಿನವೂ ಪೀಡಿಸುತ್ತಿದ್ದ. ಶುಕ್ರವಾರ ಮಧ್ಯಾಹ್ನವೂ ಕೂಡಾ ಇದೇ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಆರೋಪಿ ಮಹೇಶ್‌ ತನ್ನ ತಾಯಿಯ ತಲೆಗೆ ಒನಕೆಯಿಂದ ಬಲವಾಗಿ ಹೊಡೆದಿದ್ದಾನೆ. ಕೂಡಲೇ ತಾಯಿ ಲಕ್ಷ್ಮೀ ಕೆಳಗೆ ಬಿದ್ದಿದ್ದಾರೆ.

ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತಾದರೂ, ಅದು ಬರುವ ವೇಳೆಗೆ ಲಕ್ಷ್ಮೀ ಸಾವನ್ನಪ್ಪಿದ್ದರು. ಇನ್ನು ಎರಡನೇ ಮಗ ಸಾಲ್‌ಮನ್‌ ಕೂಡಾ ದಾಂದಲೆ ಕೇಸ್‌ ಸಂಬಂಧ ಜೈಲಿಗೆ ಹೋಗಿದ್ದನೆಂದು ಗೊತ್ತಾಗಿದೆ.

 

Share Post