ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲ ಅಲ್ಲವೇ..!:ರಾಜ್ಯ ಬಿಜೆಪಿ ಸರಣಿ ಟ್ವೀಟ್
ಬೆಂಗಳೂರು: ʻಸುಳ್ಳು ಸಿದ್ದರಾಮಯ್ಯʼ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಬಿಜೆಪಿ ಘಟಕ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯನವರ ಕಾಲೆಳೆದಿದೆ. ಸುಳ್ಳೇ ಸಿದ್ದರಾಮಯ್ಯ ಅವರ ಮನೆ ದೇವರು. ಇದಕ್ಕೆ ನೂರಾರು ಸಾಕ್ಷ್ಯಗಳಿವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ 5 ವರ್ಷದಲ್ಲಿ ನೀಡಿದ್ದು ಬರೇ 7.5 ಸಾವಿರ ಕೋಟಿ ಮಾತ್ರ. ಮಾತಿನಂತೆ ನಡೆದುಕೊಂಡಿದ್ದರೆ 50 ಸಾವಿರ ಕೋಟಿ ಬಿಡುಗಡೆಯಾಗಬೇಕಿತ್ತಲ್ಲವೇ?
ಸುಳ್ಳೇ ಸಿದ್ದರಾಮಯ್ಯ ಅವರ ಮನೆ ದೇವರು. ಇದಕ್ಕೆ ನೂರಾರು ಸಾಕ್ಷ್ಯಗಳಿವೆ.
√ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದರು.
√ ಆದರೆ 5 ವರ್ಷದಲ್ಲಿ ನೀಡಿದ್ದು ಬರೇ 7.5 ಸಾವಿರ ಕೋಟಿ ಮಾತ್ರ.
ಮಾತಿನಂತೆ ನಡೆದುಕೊಂಡಿದ್ದರೆ 50 ಸಾವಿರ ಕೋಟಿ ಬಿಡುಗಡೆಯಾಗಬೇಕಿತ್ತಲ್ಲವೇ?#ಸುಳ್ಳುರಾಮಯ್ಯ pic.twitter.com/O2ibJmL3aM
— BJP Karnataka (@BJP4Karnataka) March 25, 2022
ಪರಿಹಾರ ನೀಡುವಾಗ ಕೊಲೆಯಾದವರಿಗಿಂತ ಕೊಂದವರು ಯಾರು ಎಂಬುದನ್ನು ಬಿಜೆಪಿ ನೋಡುತ್ತದೆ – ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ, ನೀವು ಸಿಎಂ ಆಗಿದ್ದಾಗ ದನಗಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ, ದನಗಳ್ಳನಿಗೆ 10 ಲಕ್ಷ ಪರಿಹಾರ ಕೊಟ್ಟಿರಲಿಲ್ಲವೇ? ಆಗ ಕೊಂದವರು, ಕೊಲೆಯಾದವರು ಎಂಬ ಪ್ರಶ್ನೆ ಕಾಡಲಿಲ್ಲವೇ?
ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದಾಗ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಾದಾಗ ನೈತಿಕತೆಯ ಪ್ರಶ್ನೆ ನಿಮ್ಮನ್ನು ಬಾಧಿಸಲಿಲ್ಲವೇ? ಈಗ ಅನ್ಯರ ಬಗ್ಗೆ ಮಾತನಾಡುವಾಗ ನಿಮಗೆ ಈ ಎಲ್ಲ ಪ್ರಶ್ನೆಗಳು ಎದುರಾಗುತ್ತವೆಯಲ್ಲವೇ? “ಬದನೆಕಾಯಿ ತಿನ್ನುವುದಕ್ಕೆ, ಭಾಷಣ ವೇದಿಕೆಗೆ” ಎಂಬಂತಾಯ್ತು ನಿಮ್ಮ ಧೋರಣೆ.
ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ “ಸಾಲದ ಹರಿಕಾರ” ಎಂದರೆ ತಪ್ಪಾಗಲಾರದು. ಸಿದ್ದರಾಮಯ್ಯ ಅವಧಿಯಲ್ಲಿ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಯಿತು. ವಿತ್ತೀಯ ಶಿಸ್ತಿನಲ್ಲಿ ಬಜೆಟ್ ಮಂಡಿಸಿದ್ದೇನೆ ಎಂದು ಬಡಾಯಿ ಕೊಚ್ಚಿದರೂ, ಬದ್ಧತಾ ವೆಚ್ಚ ಸರಿದೂಗಿಸುವುದಕ್ಕೂ ಕಷ್ಟವಾಗಿತ್ತು ಎಂಬುದು ನಿಜವಲ್ಲವೇ?
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೆಳೆನಷ್ಟ ಹಾಗೂ ಸಾಲ ಬಾಧೆಯಿಂದ ರೈತರ ಸರಣಿ ಆತ್ಮಹತ್ಯೆ ನಡೆಯಿತು. ಆದರೆ ಸಿದ್ದರಾಮಯ್ಯ ಅವರಿಗೆ ಈ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಲು ಇಷ್ಟವಿರಲಿಲ್ಲ. ಹೀಗಾಗಿ ” ಅದು ಆತ್ಮಹತ್ಯೆ ಅಲ್ಲಾರಿ, ಕುಡಿದು ಸತ್ತಿದ್ದು” ಎಂದು ಸಾವಿನ ವಿಚಾರದಲ್ಲೂ ಸುಳ್ಳು ಹೇಳಿರಲಿಲ್ಲವೇ ?
ರಾಜಕೀಯದಲ್ಲಿ ಸುಳ್ಳು ಹೇಳುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಅವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ. #PuneethRajkumar ಅವರ #James ಸಿನಿಮಾ ತೆಗೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಆದರೆ ಚಿತ್ರ ನಿರ್ಮಾಪಕರು, ಶಿವರಾಜ್ ಕುಮಾರ್ ಇದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ. ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ರಾಜಕೀಯದಲ್ಲಿ ಸುಳ್ಳು ಹೇಳುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಅವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ.#PuneethRajkumar ಅವರ #James ಸಿನಿಮಾ ತೆಗೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಆದರೆ ಚಿತ್ರ ನಿರ್ಮಾಪಕರು, ಶಿವರಾಜ್ ಕುಮಾರ್ ಇದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ.#ಬುರುಡೆರಾಮಯ್ಯ pic.twitter.com/MPmeOnACrD
— BJP Karnataka (@BJP4Karnataka) March 25, 2022