ಸಿದ್ದರಾಮೇಶ್ವರ ಜಾತ್ರೆ ಸಿದ್ದರಾಮಯ್ಯ ಸ್ಟೆಪ್ಸ್; ವೀರಮಕ್ಕಳ ಕುಣಿತದಲ್ಲಿ ಹೆಜ್ಜೆ ಹಾಕಿದ ವಿಪಕ್ಷ ನಾಯಕ
ಮೈಸೂರು: ಮಾಜಿ ಸಿಎಂ ಹಾಗೂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ನಿನ್ನೆ ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಇತ್ತು. ಇದ್ರಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ, ಸುಮಾರು ಒಂದು ಗಂಟೆ ಕಾಲ ವೀರಮಕ್ಕಳ ಕುಣಿತದಲ್ಲಿ ಪಾಲ್ಗೊಂಡರು. ಊರ ಜನರ ಜೊತೆ ವಾದ್ಯಗಳಿಗೆ ತಕ್ಕಂತೆ ಹೆಜ್ಜೆ ಹಾಕಿದರು.
15 ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಉಪಮಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಕೂಡಾ ಸಿದ್ದರಾಮೇಶ್ವರ ಜಾತ್ರೆಗೆಂದು ಸ್ವಗ್ರಾಮಕ್ಕೆ ಬಂದಿದ್ದ ಅವರು, ಜನರ ಜೊತೆ ಹೆಜ್ಜೆ ಹಾಕಿದ್ದರು. ಅನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ದೀರ್ಘಕಾಲ ಕುಣಿದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.