National

ಕೋಲ್ಕತ್ತಾದಲ್ಲಿ ಭಾರಿ ಅಗ್ನಿ ದುರಂತ; ಹೊತ್ತಿ ಉರಿದ ಬಣ್ಣದ ಕಾರ್ಖಾನೆ

ಕೋಲ್ಕತ್ತಾ; ಪಶ್ಚಿಮ  ಬಂಗಾಳದ ಕೋಲ್ಕತ್ತಾದ ನ್ಯೂ ಅಲಿಪುರದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ಮುಚ್ಚಿದ್ದ ಬಣ್ಣದ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು 10 ಅಗ್ನಿಶಾಮಕ ವಾಹನಗಳು ಆಗಮಿಸಿದ್ದವು. ಹಲವು ಗಂಟೆಗಳ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು.

ಬೆಳಕ್ಕೆ ಕಾರ್ಖಾನೆಯ ಒಳಗಿನಿಂದ ಒಂದರ ಹಿಂದೆ ಒಂದು ಸ್ಫೋಟದ ಸದ್ದು ಕೇಳಿಸಿತು. ಕಾರ್ಖಾನೆಯಲ್ಲಿ ಹಲವಾರು ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದ್ದು, ಅವು ಸಿಡಿದು ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಈ ಕಾರ್ಖಾನೆಯಲ್ಲಿ ಕಪಾಟು ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ತಯಾರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಆದ್ದರಿಂದ, ಸುಡುವ ವಸ್ತುಗಳು ಹೆಚ್ಚಿದ್ದರಿಂದ ಬೆಂಕಿ ತ್ವರಿತವಾಗಿ ಹರಡಿದೆ.

ದುರ್ಘಟನೆ ಸಮಯದಲ್ಲಿ ಕಾರ್ಖಾನೆಯೊಳಗೆ ಯಾರಾದರೂ ಇದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಆ ವೇಳೆ ಕಾರ್ಖಾನೆಯ ಹೊರಗೆ ಮೂವರು ಕಾರ್ಮಿಕರು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ನಂತರ ಅವರು ಓಡಿಹೋಗಿದ್ದಾರೆ.

Share Post