CrimeNational

ಮೈಕ್ರೋ ಓವೆನ್‌ನಲ್ಲಿ ಎರಡು ತಿಂಗಳ ಮಗು: ಪೊಲೀಸರಿಂದ ಆರೋಪಿಗಳಿಗಾಗಿ ಬಲೆ

ದೆಹಲಿ:   ಮೈಕ್ರೋವೇವ್‌ನಲ್ಲಿ ಎರಡು ತಿಂಗಳ ಮಗುವನು ಹಾಕಿರುವ ದಾರುಣ ಘಟನೆ ದೆಹಲಿಯ ಚಿರಾಗ್‌ ಪ್ರದೇಶದಲ್ಲಿ ನಡೆದಿದೆ. ದಕ್ಷಿಣ ಡಿಸಿಪಿ ಬೆನಿಟಾ ಮೇರಿ ಜೈಕರ್ ಮಗುವಿನ ಸಾವಿನ ಬಗ್ಗೆ ಮಾಹಿತಿ ಪಡೆದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಹಂತಕರನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಪೋಷಕರಾದ ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ಶಿಶುವನ್ನು ತಾಯಿಯೇ ಕೊಂದಿರಬಹುದು ಎಂದು ಶಂಕಿಸಲಾಗಿದೆ. ಹೆಣ್ಣು ಮಗು ಜನಿಸಿದೆ ಎಂಬ ಅತೃಪ್ತಿಯಿಂದಾಗಿ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ. 2022ರ ಜನವರಿಯಲ್ಲಿ ಅನನ್ಯಾ ಜನಿಸಿದಾಗಿನಿಂದ ತಾಯಿ ಬೇಸರ ವ್ಯಕ್ತಪಡಿಸಿದ್ರಂತೆ ಈ ವಿಚಾರವಾಗಿ ಆಕೆ ತನ್ನ ಪತಿಯೊಂದಿಗೆ ಹಲವು ಬಾರಿ ಜಗಳವಾಡಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ.

ಮಗು ಸತ್ತಿರುವುದರ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ಎಚ್ಚೆತ್ತ ಪೊಲೀಸರು ತನಿಖೆ ಶುರು ಮಾಡಿದ್ದಾರೆ.  ಅನನ್ಯಾ ತಾಯಿ ಮನೆಯೊಳಗೆ ಬೀಗ ಹಾಕಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳಂತೆ.  ‘ಕೋಣೆಯ ಕಿಟಕಿ ಗಾಜು ಒಡೆದು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗಿ ಬಂದಿದೆ.  ಅನನ್ಯಾಳ ಅಜ್ಜಿ ಮತ್ತು ಕೆಲವು ನೆರೆಹೊರೆಯವರು ಒಟ್ಟಾಗಿ ಮೈಕ್ರೋವೇವ್ ಓವನ್ ತೆರೆದು ನೋಡಿದ್ದಾರೆ. ಅದೇ ಮನೆಯ ಎರಡನೇ ಕೊಠಡಿಯ ಎರಡನೇ ಮಹಡಿಯ ಮೈಕ್ರೋ ಓವೆನ್‌ನಲ್ಲಿ ಮಗುವನ್ನು ಹಾಕಿದ್ದಾಗಿ ಆರೋಪಿಸಿದ್ದಾರೆ.

Share Post