CrimeDistricts

ಹಾಸನದಲ್ಲಿ ಭೀಕರ ರಸ್ತೆ ಅಪಘಾತ:ನಾಲ್ವರು ಸ್ಥಳದಲ್ಲೇ ಸಾವು

ಹಾಸನ: ಪ್ರತಿದಿನ ರಸ್ತೆ ಅಪಘಾತಗಳದ್ದೇ ಸುದ್ದಿಯಾಗ್ತಿದೆ. ಪಾವಗಡ ಬಸ್‌ ಪಲ್ಟಿಯಾಗಿ ಆರು ಜನ ಸಾವನ್ನಪ್ಪಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆ ದುರಂತ ಘಟನೆ ಹಸಿಯಾಗಿರುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಹಾಗೂ ಕಾರು ನಡುವೆ ಭೀಕರ ಅಪಘಾತ ಉಂಟಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಹಾಸನದ ಬೇಲೂರು ಹೊರವಲಯದ ಕಲ್ಕೆರೆ ಸಮೀಪ‌ ದುರ್ಘಟನೆ ನಡೆದಿದೆ.

ಸಾರಿಗೆ ಬಸ್‌ ಹಾಗೂ ಆಲ್ಟೋ ಕಾರಿನ ನಡುವೆ ಭೀಕರ ಅಪಘಾತ ಉಂಟಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಬೇಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post