ಪ್ರಪಂಚದಾದ್ಯಂತ ಬಹುನಿರೀಕ್ಷಿತ ರಾಧೆಶ್ಯಾಮ್ ಸಿನಿಮಾ ರಿಲೀಸ್: ಮತ್ತೆ ಪೂಜಾ ಯಾಕೆ ಹೀಗಂದ್ರು..?
ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯ ‘ರಾಧೇಶ್ಯಾಮ್’ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಸಾಗರೋತ್ತರ ಸೇರಿದಂತೆ ಎಲ್ಲಾ ಕಡೆ ಬೆನಿಫಿಟ್ ಶೋಗಳು ನಡೆದಿವೆ. ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ 200 ಕೋಟಿಗೂ ಅಧಿಕವಾಗಿತ್ತು. ಈಗಾಗಲೇ ಚಿತ್ರ ನೋಡಿದವರೆಲ್ಲ ಇದೊಂದು ವಿಶುವಲ್ ವಂಡರ್ ಅಂತಿದಾರೆ. ಪ್ರೇಮಕಥೆಗೆ ಇನ್ನಷ್ಟು ಬೆರಗುಗೊಳಿಸುವ ದೃಶ್ಯಗಳನ್ನು ಸೇರಿಸಿ ಈ ಸಿನಿಮಾ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ಅಭಿಮಾನಿಗಳು.
ಆದರೆ, ಚಿತ್ರದ ಬಗ್ಗೆ ಪೂಜಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ. ಪೂಜಾ ಹೆಗ್ಡೆ ತಮ್ಮ ಸಹಾಯಕರೊಂದಿಗಿರುವ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಇರುವವರು ಮತ್ತು ಇಲ್ಲದೆ ಇರುವವರು ಈ ಸಿನಿಮಾ ಮುಗಿಯುವವರೆಗೂ ನನ್ನನ್ನು ಕಾಳಜಿ ಮಾಡಿದ ಪ್ರತಿಯೊಬ್ಬರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ. ಚಿತ್ರದ ಫಲಿತಾಂಶ ಏನೇ ಬಂದರೂ ಸರಿ, ಆದರೆ ಈ ಸಿನಿಮಾ ನಿರ್ಮಾಣ ಸಮಯದಲ್ಲಿ ನೀವು ನನಗಾಗಿ ಮಾಡಿದ ಸಹಾಯಕ್ಕೆ, ನನ್ನ ಜೊತೆ ನಿಂತಿದ್ದಕ್ಕೆ ಎಲ್ಲದಕ್ಕೂ ನಾನು ಕೃತಜ್ಞರಾಗಿರುತ್ತೇನೆ. ಈ ಸಿನಿಮಾ ಪಯಣದಲ್ಲಿ ನನ್ನ ಜೊತೆಗಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು” ಎಂದು ಪೂಜಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ.
To my beautiful team (the ones in this photo and the ones not). Thank you for taking care of me.Whatever the result of the film may be, know that I am grateful for all that you have done for me in the course of this film. Ty for being you ❤️ #appreciationpost #radheshyam #prerna pic.twitter.com/TU2Aoneb8E
— Pooja Hegde (@hegdepooja) March 10, 2022