National

ಪಾಕ್‌ ವಾಯುಪ್ರದೇಶಕ್ಕೆ ಭಾರತದ ಸೂಪರ್‌ ಸಾನಿಕ್‌ ಮಿಸೈಲ್..?-ಪಾಕ್‌ ಮಿಲಿಟರಿ ಹೇಳಿದ್ದೇನು?

ಪಾಕಿಸ್ತಾನ:  ಭಾರತದ ಸೂಪರ್‌ ಸಾನಿಕ್‌ ಮಿಸೈಲ್‌ವೊಂದು ಪಾಕಿಸ್ತಾನದ ವಾಯುಪ್ರದೇಶಕ್ಕೆ ಅತಿ ವೇಗದಲ್ಲಿ ಬಂದು ಧುಮುಕಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಬುಧವಾರ, ಮಾರ್ಚ್ 9 ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಈ ಮಿಸೈಲ್‌ ಅಪ್ಪಳಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ ಎಂದು ಪಾಕಿಸ್ತಾನ ಇಂಟರ್​ ಸರ್ವೀಸ್​ ಪಬ್ಲಿಕ್​ ರಿಲೇಶನ್ಸ್​​ನ ಡೈರೆಕ್ಟರ್ ಜನರಲ್​ ಬಾಬರ್​ ಇಫ್ತಿಕಾರ್​ ಹೇಳಿದ್ದಾರೆ.

ಮಾರ್ಚ್ 9 ರಂದು ಸಂಜೆ 6:43 ಕ್ಕೆ, ವೇಗವಾಗಿ ಬಂದ ವಸ್ತುವೊಂದು ಭಾರತದಿಂದ ಪಾಕಿಸ್ತಾನದ ವಾಯುಪ್ರದೇಶ ಖಾನೇವಾಲ್​ ಜಿಲ್ಲೆಯ ಮಿಯಾನ್​ ಚನ್ನು ಎಂಬಲ್ಲಿ ಬಿದ್ದಿದೆ. ಅಪಘಾತಕ್ಕೀಡಾದ ಇದರ ಅವಶೇಷಗಳನ್ನು ಪರಿಶಳಿನೆ ಮಾಡಿದಾಗ ಇದೊಂದು ಕ್ಷಿಪಣಿ ಎಂದು ತಿಳಿದುಬಂದಿದೆ. ಈ ಬಗ್ಗೆ ಭಾರತ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಕೋರಿದರು.

ಇದು 40,000 ಅಡಿ ಎತ್ತರದಲ್ಲಿ 207 ಕಿಲೋಮೀಟರ್ ಹಾರಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ಅಪ್ಪಳಿಸಿದೆ. ಈ ಸೂಪರ್ಸಾನಿಕ್ ಕ್ಷಿಪಣಿಯನ್ನು ಸಂಪೂರ್ಣ ನಿಶಸ್ತ್ರವಾಗಿದ್ದರಿಂದ ಹಾನಿ ತಪ್ಪಿದೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ತನಿಖೆ ನಡೆಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಇಫ್ತಿಕಾರ್‌ ತಿಳಿಸಿದ್ದಾರೆ.

Share Post