Bengaluru

ರಾಜ್ಯ ಸರ್ಕಾರದ ಒಟ್ಟು ಸಾಲ ಎಷ್ಟು ಗೊತ್ತಾ..?; ಬರೋಬ್ಬರಿ 5 ಲಕ್ಷ 18 ಸಾವಿರ ಕೋಟಿ ರೂ.!

ಬೆಂಗಳೂರು: ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತಹ ಪರಿಸ್ಥಿತಿ ನಮ್ಮ ರಾಜ್ಯ ಸರ್ಕಾರದ್ದು. ಯಾವುದೇ ಸರ್ಕಾರ ಬರಲಿ ಸಾಲ ಮಾಡೋದು ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಲಾಗುತ್ತಲೇ ಇದೆ. ಸದ್ಯ ಅಂದರೆ 2022-23ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 5 ಲಕ್ಷದ 18 ಸಾವಿರದ 366 ಕೋಟಿ ರೂಪಾಯಿ ಇದೆ ಅಂದರೆ ನೀವು ನಂಬಲೇಬೇಕು. 

  ಕಳೆದ ಹತ್ತು ವರ್ಷಗಳಲ್ಲಿ ಅಧಿಕಾರ ಮಾಡಿದ ಪಕ್ಷಗಳು ಅತಿ ಹೆಚ್ಚು ಸಾಲ ಮಾಡಿವೆ. ಈಗಲೂ ಮಾಡುತ್ತಲಿವೆ. ಹೀಗಾಗಿ ಸಾಲದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇದೇ ರೀತಿ ಮುಂದುವರೆದರೆ 2024-25ರ ವೇಳೆಗೆ ರಾಜ್ಯದ ಸಾಲದ ಹೊರೆ 6 ಲಕ್ಷದ 60 ಸಾವಿರದ 766 ಕೋಟಿ ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಂದೀಚೆಗೆ ರಾಜ್ಯದ ಸಾಲ ದುಪ್ಪಟ್ಟಾಗಿದೆ. ಅಂದಹಾಗೆ ಕಳೆದ ಹತ್ತು ವರ್ಷಗಳಲ್ಲಿ ಯಾವ ವರ್ಷ ಎಷ್ಟು ಸಾಲ ಪಡೆಯಲಾಯಿತು..? ಇಲ್ಲಿದೆ ವಿವರ..

 

ರಾಜ್ಯ ಸರ್ಕಾರ ವಾರ್ಷಿಕ ಪಡೆದ ಸಾಲ

೧. 2010-11: ಸಾಲ- 6,714 ಕೋಟಿ ರೂ.

೨. 2011-12: ಸಾಲ- 9,358 ಕೋಟಿ ರೂ.

೩. 2012-13: ಸಾಲ- 13,465 ಕೋಟಿ ರೂ.

೪. 2013-14: ಸಾಲ- 17,287 ಕೋಟಿ ರೂ.

೫. 2014-15: ಸಾಲ- 21,875 ಕೋಟಿ ರೂ.

೬. 2015-16: ಸಾಲ- 21,072 ಕೋಟಿ ರೂ.

೭. 2016-17: ಸಾಲ- 31,156 ಕೋಟಿ ರೂ.

೮. 2017-18: ಸಾಲ- 35,122 ಕೋಟಿ ರೂ.

೯. 2018-19: ಸಾಲ- 41,914 ಕೋಟಿ ರೂ.

೧೦. 2019-20: ಸಾಲ- 50,459 ಕೋಟಿ ರೂ.

೧೧. 2020-21: ಸಾಲ- 72,121 ಕೋಟಿ ರೂ.

Share Post