ಭಾರತೀಯರ ಸ್ಥಳಾಂತರಕ್ಕೆ ಉಕ್ರೇನ್‌ಗೆ ಕೊನೆಯ ವಿಮಾನ: ಭಾರತೀಯ ರಾಯಭಾರ ಕಚೇರಿಯಿಂದ ಮಾಹಿತಿ
ಉಕ್ರೇನ್: ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ವಿಚಾರವಾಗಿ ಕೊನೆಯ ವಿಮಾನವು ಇಂದು (ಭಾನುವಾರ) ಮಾರ್ಚ್ 6 ರಂದು ಹೊರಡಲಿದೆ. ಈ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಕಚೇರಿ ಅಲ್ಲಿನ ಭಾರತೀಯರಿಗೆ ಮಹತ್ವದ ಸಲಹೆಗಳನ್ನು ನೀಡಿದೆ. ಗೂಗಲ್ ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಭ್ಯರ್ಥಿ ಹೆಸರು, ಯಾವ ನಗರದಲ್ಲಿ ವಾಸವಾಗಿದ್ದಾರೆಂಬ ಇತರೆ ಮಾಹಿತಿಗಳನ್ನು ತುಂಬಲು ತಿಳಿಸಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಆರಂಭಿಸಲಾದ ಆಪರೇಷನ್ ಗಂಗಾ ತನ್ನ ಅಂತಿಮ ಹಂತವನ್ನು ತಲುಪಿದೆ ಎಂದು ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಡಾಪೆಸ್ಟ್‌ನಿಂದ ಕೊನೆಯ ವಿಮಾನ ಹೊರಡಲಿದೆ ಎಂದು ಘೋಷಿಸಿದೆ. ರಾಯಭಾರ ಕಚೇರಿಯಿಂದ ಒದಗಿಸಲಾದ ಸೌಕರ್ಯಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ವಾಸಿಸುತ್ತಿರುವವರು 10-12ಗಂಟೆಗಳ ಒಳಗಾಗಿ ಬುಡಾಪೆಸ್ಟ್ ತಲುಪಬೇಕೆಂದು ಮಾಹಿತಿ ನೀಡಿದೆ.
ಇದುವರೆಗೆ ಸುಮಾರು 30,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಅವುಗಳ ಜೊತೆಗೆ ಎರಡು ಬೆಕ್ಕುಗಳು ಕೂಡ ಉಕ್ರೇನ್ ಬಿಟ್ಟು ಭಾರತವನ್ನು ತಲುಪಿದ್ದಾವೆ. ಹೌದು, ಉಕ್ರೇನ್‌ನ ವಿದ್ಯಾರ್ಥಿಯೊಬ್ಬ ಉಕ್ರೇನ್‌ನಿಂದ ಎರಡು ಸಾಕು ಬೆಕ್ಕುಗಳನ್ನು ತನ್ನೊಂದಿಗೆ ತಂದಿದ್ದಾನೆ.
ಇದಕ್ಕೆ ಒಪ್ಪಿಗೆ ನೀಡಿದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ವಿದ್ಯಾರ್ಥಿ ಧನ್ಯವಾದ ಅರ್ಪಿಸಿದ್ರು. ಬೆಕ್ಕುಗಳು ನನ್ನ ಜೀವನ .. ನಾನು ಅವುಗಳನ್ನು ಉಕ್ರೇನ್‌ನಲ್ಲಿ ಬಿಡಲಾಗಲಿಲ್ಲ. ಪ್ರತಿಯೊಬ್ಬರೂ ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಮರಳಿ ತರಲು ಬಯಸುತ್ತಾರೆ ಎಂದು ವಿದ್ಯಾರ್ಥಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.