CrimeInternational

ಭೀಕರ ರಸ್ತೆ ಅಪಘಾತ; ದುರಂತದಲ್ಲಿ 16 ಮಂದಿ ದುರ್ಮರಣ!

ಇರಾಕ್‌; ಇರಾಕ್‌ ನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಈ ದುರಂತದಲ್ಲಿ 16 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಇನ್ನೂ 13 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ..

ಇರಾಕ್‌ನ ಉತ್ತರ ಸಲಾಬುದ್ದೀನ್​ ಪ್ರಾಂತ್ಯದ ಎರಡು ನಗರಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.. ಒಂದು ಟ್ರಕ್‌ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ನಂತರ ಬೆಂಕಿ ಹೊತ್ತಿಕೊಂಡು ಎರಡೂ ವಾಹನಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ..

 

Share Post