ರಷ್ಯಾ ಹೊಸ ನಿರ್ಣಯ-ಭಾರತೀಯರು ಸೇರಿದಂತೆ ಇತರೆ ದೇಶದ ಪ್ರಜೆಗಳ ಸ್ಥಳಾಂತರಕ್ಕೆ ಬಸ್‌ಗಳ ವ್ಯವಸ್ಥೆ
ಉಕ್ರೇನ್: ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಸತತ ಒಂಭತತು ದಿನಗಳಿಂದ ನಡೆಯುತ್ತಿರುವ ಯುದ್ಧದಿಂದ ಅಲ್ಲಿ ನೆಲೆಸಿರುವ ಜನರ ಪರಿಸ್ಥಿತಿ ಹೇಳತೀರದಾಗಿದೆ. ತಮ್ಮ ತಮ್ಮ ದೇಶಗಳಿಗೆ ಹೋಗಲು ಜನ ಹಾತೊರೆಯುದಿದ್ದಾರೆ. ಆದರೆ ಬಾಂಬ್, ಮಿಸೈಲ್ ದಾಳಿಗಳಿಂದ ಆಚೆ ಬರಲಾಗದೆ ಕಣ್ಣೀರು ಹಾಕ್ತಿದಾರೆ. ಈ ನಡುವೆ ರಷ್ಯಾ ಉಕ್ರೇನ್ ನಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ಇತರೆ ದೇಶಗಳ ಪ್ರಜೆಗಳ ಸ್ಥಳಾಂತರಕ್ಕೆ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.
ಈ ನಿಟ್ಟಿನಲ್ಲಿ 130 ಬಸ್ಸುಗಳನ್ನು (ರಷ್ಯಾ ಬಸ್ಸುಗಳು) ಸ್ಥಳಾಂತರಿಸುವ ಕಾರ್ಯಾಚರಣೆಗೆ ಇಳಿದಿದೆ . ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿ ನಗರಗಳಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ವಿದೇಶಿಯರನ್ನು ಬಸ್ ಮೂಲಕ ಸಾಗಿಸಲಾಗುತ್ತದೆ. ಅಲ್ಲಿಂದ ವಿದೇಶಿಯರು ತಮ್ಮ ದೇಶಗಳಿಗೆ ಹೋಗಬಹುದು ಎಂದು ಕರೆ ನೀಡಿದೆ.
ಭಾರತವು ಇದುವರೆಗೆ ಉಕ್ರೇನ್‌ನ ನೆರೆಯ ರೊಮೇನಿಯಾ ಮತ್ತು ಹಂಗೇರಿಯೊಂದಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುತ್ತಿದೆ. ಆದರೂ ಉಕ್ರೇನ್‌ನಲ್ಲಿರುವ ಹಲವು ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ರಷ್ಯಾದ ಇತ್ತೀಚಿನ ನಿರ್ಧಾರದಿಂದ ಇವರೆಲ್ಲರೂ ಸುರಕ್ಷಿತವಾಗಿ ಉಕ್ರೇನ್‌ನಿಂದ ತೆರಳುವ ಸಾಧ್ಯತೆ ಇದೆ.