ಪುಟಿನ್ ತಲೆಗೆ ಬೆಲೆ ಕಟ್ಟಿದ ರಷ್ಯಾ ಕುಬೇರ-ತಲೆ ತೆಗೆದವನಿಗೆ ಒಂದು ಮಿಲಿಯನ್ ಡಾಲರ್ ಗಿಫ್ಟ್
ರಷ್ಯಾ: ವಿಶ್ವದ ಎಲ್ಲಾ ದೇಶಗಳು ಉಕ್ರೇನ್ ಮೇಲಿನ ಯುದ್ಧವನ್ನು ಖಂಡಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ರಷ್ಯಾದ ಶ್ರೀಮಂತರೊಬ್ಬರು ಸೇನೆಗೆ ಬಂಪರ್ ಆಫರ್ ನೀಡಿದ್ದಾರೆ. ಪುಟಿನ್ ತಲೆ ಕಡಿದು ಹಾಕಿದರೆ ನಾನು ಅವರಿಗೆ ಮಿಲಿಯನ್ ಡಾಲರ್ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ರಾಜಕೀಯ ಒತ್ತಡದಿಂದಾಗಿ ರಷ್ಯಾವನ್ನು ತೊರೆದ ಉದ್ಯಮಿ ಅಲೆಕ್ಸ್ ಕೊನಾನಿಖಿನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಕೊನಾನಿಖಿನ್ “ಯುದ್ಧಾಪರಾಧಿ” ಪುಟಿನ್ ಬಂಧಿಸಿದ್ರೆ ಅಥವಾ ಹತ್ಯೆ ಮಾಡಿದ್ರೆ ಮಿಲಿಟರಿಗೆ 1 ಮಿಲಿಯನ್ ಡಾಲರ್ ನೀಡುವುದಾಗಿ ಪ್ರಸ್ತಾಪಿಸಿದರು. ಉದ್ಯಮಿ ಕೋನಾನಿಖಿನ್ ತನ್ನ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ.
ರಷ್ಯಾದ ಕೊನಾನಿಖಿನ್, ಯುನೈಟೆಡ್ ಸ್ಟೇಟ್ಸ್ನಲ್ಲಿ ವಿವಿಧ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿದ್ದಾರೆ . ಎಷ್ಟೇ ಸಂಪಾದನೆ ಮಾಡಿದರೂ ಸ್ವಂತ ಮನೆಯಲ್ಲಿರುವ ಸುಖವೇ ಬೇರೆ. ಆದರೆ ರಷ್ಯಾಕ್ಕೆ ಹೋದರೆ ಅವರ ಮೇಲೆ ಸಾಕಷ್ಟು ರಾಜಕೀಯ ಒತ್ತಡವಿದೆ. ಹಾಗಾಗಿ ಪುಟಿನ್ ವಿರುದ್ಧ ಕೊನಾನಿಖಿನ್ಗೆ ಎಲ್ಲಿಲ್ಲದ ಕೋಪ. ಅಮೆರಿಕದಲ್ಲಿ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿರುವ ಕೊನಾನಿಖಿನ್ ಕ್ರಿಪ್ಟೋ ಹೂಡಿಕೆದಾರರಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಅವರ ನಿವ್ವಳ ಮೌಲ್ಯ $ 300 ಮಿಲಿಯನ್ ಡಾಲರ್. ತನ್ನ ಗಳಿಕೆಯ ಒಂದು ಮಿಲಿಯನ್ ಡಾಲರ್ಗಳನ್ನು ಪುಟಿನ್ ಹತ್ಯೆಗೆ ಬಳಸಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಫೇಸ್ಬುಕ್ ಪೋಸ್ಟ್ನಲ್ಲಿ ಕೊನಾನಿಖಿನ್ ಈ ರೀತಿ ಬರೆದುಕೊಂಡಿದ್ದಾರೆ “ಪುಟಿನ್ ರಷ್ಯಾದ ಸಂವಿಧಾನವನ್ನು ತುಳಿದ ಮುಕ್ತ ಚುನಾವಣೆಗಳನ್ನು ನಡೆಸದೆ ಅಧಿಕಾರಕ್ಕೆ ಬಂದಿದ್ದಾನೆ. ನಾಜಿಗಳಂತೆ ಸರ್ವಾಧಿಕಾರಿಯಾಗಲು ಹೊರಟಿದ್ದಾರೆ. ಅನ್ಯಾಯವಾಗಿ ಉಕ್ರೇನ್ ವಿರುದ್ಧ ಯುದ್ಧ ಮಾಡಿ ಸಾವಿರಾರು ಜನರನ್ನು ಕೊಲೆ ಮಾಡಿದ್ದಾನೆ ಎಂದಿದ್ದಾರೆ. ರಷ್ಯಾದ ಪ್ರಜೆಯಾಗಿ ನಾಜಿಸಂನಿಂದ ನನ್ನ ದೇಶವನ್ನು ರಕ್ಷಿಸುವ ಜವಾಬ್ದಾರಿ ನನ್ನ ಮೇಲಿದೆ. “ಜೀವನಕ್ಕಾಗಿ ಹೋರಾಡುತ್ತಿರುವ ಉಕ್ರೇನ್ ಜನರಿಗೆ ನಾನು ತಲೆಬಾಗುತ್ತೇನೆ”.
ರಷ್ಯಾದಲ್ಲಿ ವಿವಿಧ ರಾಜಕೀಯ ಒತ್ತಡಗಳಿಂದಾಗಿ ಕೊನಾನಿಖಿನ್ 1992 ರಲ್ಲಿ ರಷ್ಯಾವನ್ನು ತೊರೆದರು. 1999 ರಿಂದ ಅಮೆರಿಕದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕೊನಾನಿಖಿನ್ ಅಮೆರಿಕದ ಪ್ರಮುಖ ಉದ್ಯಮಿಗಳೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ.