ಉಕ್ರೇನ್ ಮೇಲಿನ ಯುದ್ಧವನ್ನು ರಷ್ಯಾ ತಕ್ಷಣ ನಿಲ್ಲಿಸಬೇಕು-ವಿಶ್ವಸಂಸ್ಥೆ ನಿರ್ಣಯ
ನ್ಯೂಯಾರ್ಕ್: ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ಪ್ರಪಂಚದಾದ್ಯಂತ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿದಷ್ಟೂ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧವನ್ನು ತೀವ್ರಗೊಳಿಸಿದ್ದಾರೆ. ಯುದ್ಧವನ್ನು ಅಂತ್ಯಗೊಳಿಸುವಂತೆ ನ್ಯಾಟೋ ಸದಸ್ಯ ರಾಷ್ಟ್ರಗಳು ಎಚ್ಚರಿಕೆ ನೀಡಿದರೂ, ಪುಟಿನ್ ಮಾತ್ರ ಹಿಂದೆ ಸರಿಯುತ್ತಿಲ್ಲ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ. ಉಕ್ರೇನ್ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಬೆಂಬಲಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ನಿರ್ಣಯವನ್ನು ಅಂಗೀಕರಿಸಿತು. ರಷ್ಯಾ ವಿರುದ್ಧದ ನಿರ್ಣಯದ ಪರವಾಗಿ 141 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದವು.
ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಸೇರಿದಂತೆ ಒಟ್ಟು 141 ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಇತರ ಐದು ದೇಶಗಳು ರಷ್ಯಾಗೆ ಸಪೋರ್ಟ್ ಮಾಡಿದವು. ಉಕ್ರೇನ್ ವಿಷಯದಲ್ಲಿ ವಿಶ್ವಸಂಸ್ಥೆಯಲ್ಲಿ ಮತದಾನ ಮಾಡಲು ಭಾರತವನ್ನು ಒಳಗೊಂಡಂತೆ 35 ದೇಶಗಳು ದೂರ ಉಳಿದಿವೆ. ಉಕ್ರೇನ್ ಮೇಲಿನ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪರಿಶೀಲನೆ ತೀವ್ರಗೊಳಿಸಿರುವುದು ತಪ್ಪು ಎಂದು ಸೂಚಿಸಿದೆ.
ಯುದ್ಧವನ್ನು ಕೊನೆಗೊಳಿಸಿ ಎರಡು ದೇಶಗಳ ನಡುವೆ ಶಾಂತಿ ಸ್ಥಾಪನೆ ಮಾಡಲು ಕರೆ ನೀಡಿತು. ಉಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತ ಮೊದಲಿನಿಂದಲೂ ತಟಸ್ಥವಾಗಿದೆ. ಎರಡೂ ಕಡೆಯವರು ಶಾಂತಿಯುತ ಮಾತುಕತೆ
ಮೂಲಕ ಸಮಸ್ಯೆಗಳನ್ನು ಪರಿಹರಿಸಲು ನೋಡುತ್ತಿದ್ದಾರೆ.