International

UKRAINE-RUSSIA WAR; ಆರು ದಿನದಲ್ಲಿ 6000 ರಷ್ಯಾ ಸೈನಿಕರ ಹತ್ಯೆ; ಉಕ್ರೇನ್‌ ಮಾಹಿತಿ

ಕೀವ್‌; ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ. ಕಳೆದ ಮೂರು ದಿನಗಳಿಂದ ರಷ್ಯಾ ಸೈನಿಕರು ಜನವಸತಿ ಪ್ರದೇಶಗಳ ಮೇಲೂ ದಾಳಿ ನಡೆಸುತ್ತಿದ್ದಾರೆ. ಇದರ ನಡುವೆ ಉಕ್ರೇನ್‌ ಕೂಡಾ ರಷ್ಯಾ ಸೈನಿಕರ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಕಳೆದ ಆರು ದಿನಗಳಲ್ಲಿ ಸುಮಾರು 6000 ರಷ್ಯಾ ಸೈನಿಕರನ್ನು ಹತ್ಯೆಗೈದಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ.

ರಷ್ಯಾ ದಾಳಿಗೆ ಪ್ರತಿಯಾಗಿ ನಾವೂ ಪ್ರತಿದಾಳಿ ನಡೆಸುತ್ತಿದ್ದೇವೆ. ನಾನು ನಡೆಸಿದ ದಾಳಿಯಲ್ಲಿ ರಷ್ಯಾಗೆ ಸೇರಿದ ಸುಮಾರು 30 ಯುದ್ಧವಿಮಾನಗಳನ್ನು ನಾಶಪಡಿಸಿದ್ದೇವೆ. 211 ಯುದ್ಧಟ್ಯಾಂಕ್, 31 ಹೆಲಿಕಾಪ್ಟರ್​ಗಳು, 862 ಸಶಸ್ತ್ರ ವಾಹನಗಳನ್ನು ಕೂಡಾ ನಾವು ಧ್ವಂಸಗೊಳಿಸಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ.

Share Post