ಮತ್ತೊಂದು ಪ್ರಾಣ ಹೋಗುವ ಮೊದಲು ನಮ್ಮನ್ನು ಕರೆಸಿಕೊಳ್ಳಿ-ಸ್ನೇಹಿತನ ನೆನೆದು ಅಮಿತ್ ಕಣ್ಣೀರು
ಖಾರ್ಕಿವ್: ಇಂದು ನಾನು ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಬಲಿಯಾದ ಒಂದು ಜೀವದ ಬಗ್ಗೆಯೆ ನೋವು ತಡೆಯಲು ಆಗ್ತಿಲ್ಲ. ಮತ್ತೊಷ್ಟು ಪ್ರಾಣ ಹೋಗುವ ಮೊದಲು ನಮ್ಮನ್ನು ಇಲ್ಲಿಂದ ಕರೆಸಿಕೊಲ್ಳಿ ಎಂದು ಅಮಿತ್ ಕಣ್ಣೀರು ಹಾಕುತ್ತಾ ಮನವಿ ಮಾಡಿಕೊಂಡಿದ್ದಾರೆ. ಭಾರತ ಸರ್ಕಾರ ಏನು ಮಾಡ್ತಿದೆ ಅಂತ ನಮಗೆ ತಿಳಿಯುತ್ತಿಲ್ಲ. ಸಾವಿರಾರು ವಿದ್ಯಾರ್ಥಿಗಳು ಬಂಕರ್‌ಗಳಲ್ಲಿ ಸಿಲುಕಿದ್ದಾರೆ. ಅನ್ನ, ನೀರಿಲ್ಲದೆ ಪರದಾಡುತ್ತಿದ್ದಾರೆ. ಹೊಟ್ಟೆ ಹಸಿವು ತಾಳಲಾರದೆ, ಆಹಾರ ತರಲು ಆಚೆ ಹೋದವನು ಇಂದು ಹೆಣವಾಗಿದ್ದಾನೆ ಎಂದು ಗದ್ಗದಿತರಾಗಿ ಮಾತನಾಡಿದ್ರು ಅಮಿತ್.
ಇಂದಿಗೆ ಆರು ದಿನಗಳಾಗಿವೆ ನಾವು ಬಂಕರ್‌ನಲ್ಲಿ ಸಿಲುಕಿ, ಬಿಸ್ಕೆಟ್, ಸ್ನಿಕ್ಕರ್ಸ್ ಸಿಕ್ಕ ಸಿಕ್ಕ ಪದಾರ್ಥಗಳನ್ನು ತಿನ್ನುತ್ತಿದೇವೆ. ಕುಡಿಯೋಕೆ ನೀರಿಲ್ಲ ಹೊಟ್ಟೆ ಹಸಿವು ತಾಳಲಾಗುತ್ತಿಲ್ಲ. ನಾವು 4th year ಇನ್ನೂ ಮೊದಲನೇ ವರ್ಷದ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸರಿಯಾಗಿ ಭಾಷೆ ಬರಲ್ಲ, ಇಲ್ಲಿನ ಬಗ್ಗೆ ಏನೂ ಗೊತ್ತಿಲ್ಲ ಅವರ ಕತೆಯೇನು. ದಯವಿಟ್ಟು ಕೈ ಮುಗಿದು ಕೇಳಿಕೊಳ್ತೇನೆ ನಮ್ಮನ್ನು ಕೂಡಲೇ ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ, ನನ್ನ ಸ್ನೇಹಿತನಿಗೆ ಆದ ಗತಿ ಇನ್ಯಾರಿಗೂ ಬರಬಾರದು ಎಂದು ಅಮಿತ್ ಮನವಿ ಮಾಡಿಕೊಂಡಿದ್ದಾರೆ.