ತಿಂಡಿ ತರಲು ಬೆಳಗ್ಗೆ 6 ಗಂಟೆಗೆ ಹೊರಹೋಗಿದ್ದ ನವೀನ್ ; ಹಣ ಕಡಿಮೆ ಇದೆ ಎಂದು ಕರೆ ಮಾಡಿದ್ದ – ಸ್ನೇಹಿತ ಅಮಿತ್
ಖಾರ್ಕೀವ್; ನಾಲ್ಕನೇ ವರ್ಷದ ಮೆಡಿಕಲ್ ಓದುತ್ತಿದ್ದ ನವೀನ್ ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಆಹಾರ ಪದಾರ್ಥ ತರಲು ಮಾರ್ಕೆಟ್ಗೆ ಹೋಗಿದ್ದ. ವಿದ್ಯಾರ್ಥಿಗಳಿದ್ದ ಬಂಕರ್ ಸಮೀಪ ಅಂದರೆ 50 ಮೀಟರ್ ಅಂತರದಲ್ಲೇ ಸೂಪರ್ ಮಾರ್ಕೆಟ್ ಇತ್ತು. ಹೀಗಾಗಿ ಬೇಗ ಬರಬಹುದು ಎಂದು ತಿಂಡಿ ತರುತ್ತೇನೆಂದು ಹೋಗಿದ್ದ. ಈ ಸಮಯದಲ್ಲೇ ಶೇಲ್ ದಾಳಿಯಾಗಿದೆ ಎಂದು ಖಾರ್ಕೀವ್ನಲ್ಲೇ ಇರುವ ನವೀನ್ ಸ್ನೇಹಿತ ಅಮಿತ್ ಹೇಳಿದ್ದಾರೆ.
ತಿಂಡಿ ತರಲೆಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ನವೀನ್ ಹೊರಹೋದ. ನಂತರ ಸೂಪರ್ ಮಾರ್ಕೆಟ್ನಿಂದ ಕರೆ ಮಾಡಿ ಹಣ ಕಡಿಮೆಯಾಗಿದೆ. ಟ್ರಾನ್ಸ್ ಫರ್ ಮಾಡು ಎಂದು ಹೇಳಿದ. ಅನಂತರ ಮೂರು ಗಂಟೆಯಾದರೂ ಆತ ಬರಲೇ ಇಲ್ಲ ಎಂದು ಅಮಿತ್ ಹೇಳಿಕೊಂಡಿದ್ದಾರೆ.