ನೆಮ್ಮದಿಯ ಜೀವನ ಸಾಗಿಸಲು ಆಫ್ಘನ್‌ನಿಂದ ಇಲ್ಲಿಗೆ ಬಂದ್ರೆ, ಇಲ್ಲೂ ಯುದ್ಧ ಶುರುವಾಗಿದೆ-ಸಂತ್ರಸ್ತನ ಅಳಲು
ಪೋಲೆಂಡ್: ಯುದ್ಧ ಭೀತಿಯಿಂದಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುತ್ತಿರುವ ಸಂತ್ರಸ್ತ ಕುಟುಂಬದ ಕಥೆಯಿದು. ಒಂದು ವರ್ಷದ ಹಿಂದೆ ಆಫ್ಘಅನಿಸ್ತಾನದಲಲಿ ಉಂಟಾದ ಯುದ್ಧದಿಂದ ಬೇಸತ್ತು ಉಕ್ರೇನ್‌ಗೆ ಬಂದು ನೆಮ್ಮದಿಯಿಂದ ಜೀವನ ಮಾಡ್ತಿದ್ವಿ. ಆದ್ರೆ ಕಳೆದ ಐದು ದಿನಗಳಿಂದ ಇಲ್ಲೂ ಕೂಡ ಯುದ್ಧ ನಡೆಯುತ್ತಿದೆ. ಎಂದು ಅಜ್ಮಲ್ ರಹಮಾನ್ ಕುಟುಂಬ ಅಳಲು ತೋಡಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ಆಫ್ಘಾನಿಸ್ತಾನದಲ್ಲಿ ಸ್ವಂತ ಕಾರು, ಮನೆ ಎಲ್ಲವೂ ಇತ್ತು, ಐಷಾರಾಮಿ ಜೀವನ ನಡೆಸುತ್ತಿದ್ದ ನಾವು ಯುದ್ಧದಿಂದಾಗಿ ಎಲ್ಲವನ್ನೂ ಕಳೆದುಕೊಂಡು ಜೀವನ ನಡೆಸಲು ಇಲ್ಲಿಗೆ ಬಂದೆವು. ಆದ್ರೆ ಇದೀಗ ಇಲ್ಲೂ ಕೂಡ ಯುದ್ಧ ನಡೆಯುತ್ತಿದೆ ನಮ್ಮ ಹಣೆಬರಹ ಸರಿಯಿಲ್ಲ ಎಂದು ಪೋಲೆಂಡ್‌ಗೆ ವಲಸೆ ಹೊರಟ ಕುಟುಂಬವೊಂದು ಬೇಸರ ವ್ಯಕ್ತಪಡಿಸಿದೆ.
ಏಳು ವರ್ಷದ ಮಕ್ಕಳನ್ನು ಹಿಡಿದುಕೊಂಡು. ಒಂದು ಕೈಯಲಿ ಬ್ಯಾಗ್ ಹಿಡಿದು ಪೋಲೆಂಡ್‌ನತ್ತ ಮೂವತ್ತು ಕಿ.ಲೋ. ಮೀಟರ್ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಯುದ್ಧ ಭೀತಿಯಿಂದಾಗಿ ಕಳೆದ ಒಂದು ವರ್ಷದಿಂದ ಎಲ್ಲಿಯೂ ನೆಲೆಯಿಲ್ಲದೆ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವುದೇ ನಮ್ಮ ಕರ್ಮವಾಗಿದೆ ಎಂದು ಕಣ್ಣೀರು ಹಾಕಿದೆ ಅಜ್ಮಲ್ ಕುಟುಂಬ.