ಉಕ್ರೇನ್‌ನಿಂದ ಮುಂಬೈ ತಲುಪಿದ 219 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ
ಮುಂಬೈ: ಉಕ್ರೇನ್‌ನಿಂದ 219 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಮುಂಬೈನಲ್ಲಿ ಸೇಫಾಗಿ ಲ್ಯಾಂಡ್ ಆಗಿದೆ. ರೊಮೇನಿಯಾದ ಬುಕಾರೆಸ್ಟ್‌ನಿಂದ ಹೊರಟು ಮುಂಬೈಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ 219 ಭಾರತೀಯರಿದ್ದರು. ಆಯಾ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡುತ್ತಿವೆ. ಉಕ್ರೇನ್‌ನಲ್ಲಿ ಸಿಲುಕಿರುವ ನೂರಾರು ಭಾರತೀಯರು ಯುದ್ಧ ಭೀಕರ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಾಲಕಾಲಕ್ಕೆ ಅವರು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆಯೇ ಎಂದು ಯೋಚಿಸುತ್ತಾ ತಮ್ಮ ಜೀವನವನ್ನು ಕಳೆಯುವಂತಾಗಿದೆ. ಏರ್ ಇಂಡಿಯಾ ವಿಮಾನ ಉಕ್ರೇನ್‌ನ ಬುಕಾರೆಸ್ಟ್‌ನಿಂದ ಸ್ವದೇಶಕ್ಕೆ ಮರಳುತ್ತಿದ್ದಂತೆ 219 ಭಾರತೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರವನ್ನು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೇ ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯ ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ. ಮತ್ತೊಂದು ಏರ್ ಇಂಡಿಯಾ ವಿಮಾನವು ಭಾನುವಾರ (ಫೆಬ್ರವರಿ 27) ಬೆಳಗಿನ ಜಾವ 2:30 ಕ್ಕೆ ದೆಹಲಿಗೆ ಆಗಮಿಸಲಿದೆ. ಪ್ರತಿ ವಿಮಾನವು 235 ರಿಂದ 240 ವಿದ್ಯಾರ್ಥಿಗಳನ್ನು ಹೊತ್ತೊಯ್ಯುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಬಸ್‌ಗಳಲ್ಲಿ ಬುಕಾರೆಸ್ಟ್ ವಿಮಾನ ನಿಲ್ದಾಣಕ್ಕೆ ಬರಲು ವಿಳಂಬವಾದ ಕಾರಣ ಮುಂಬೈ ಮತ್ತು ದೆಹಲಿಗೆ ತಲುಪುವ ವಿಮಾನಗಳು ಸಮಯ ವಿಳಂಬವಾಗಿವೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.