HealthNational

ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಳ; ಮಹಾರಾಷ್ಟ್ರದಲ್ಲಿ ಒಟ್ಟು 8 ಪ್ರಕರಣಗಳು

ಮುಂಬೈ: ದೇಶದಲ್ಲಿ ಒಮಿಕ್ರಾನ್‌ ಕೇಸುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಇಂದು ಏಳು ಮಂದಿಗೆ ಒಮಿಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ. ಇದ್ರಿಂದಾಗಿ ಮಹಾರಾಷ್ಟ್ರದಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ 8 ಕ್ಕೆ ಏರಿದೆ.

ನೈಜೀರಿಯಾ ಹಾಗೂ ಪಿನ್‌ಲೆಂಡ್‌ನಿಂದ ಬಂದವರಿಗೆ ಒಮಿಕ್ರಾನ್‌ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕಿತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸೋಂಕಿತರನ್ನು ಐಸೋಲೇಷನ್‌ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕ, ಗುಜರಾತ್‌ ಹಾಗೂ ದೆಹಲಿಯಲ್ಲಿ ಕೂಡಾ ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ದಿನ ದೇಶದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚು ಮಾಡಿದೆ. ಈ ಬೆನ್ನಲ್ಲೇ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿವೆ.

Share Post