International

ರಷ್ಯಾ ದಾಳಿಗೆ ಉಕ್ರೇನ್‌ ತತ್ತರ-ಭಾರತದಿಂದ ಮೆಡಿಸಿನ್‌ ಪೂರೈಕೆ ಮಾಡುವಂತೆ ಎಂಪಿ ಸೋಫಿಯಾ ಮನವಿ

ಉಕ್ರೇನ್:‌ ರಷ್ಯಾದ ಆಕ್ರಮಣದಿಂದ ಉಕ್ರೇನ್ ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಬಾಂಬ್ ಸ್ಫೋಟದಿಂದಾಗಿ ಉಕ್ರೇನ್‌ ಪ್ರಜೆಗಳು ಗಾಯಗೊಂಡಿದ್ದಾರೆ. ಹಾಗಾಗಿ ಭಾರತಕ್ಕೆ ಉಕ್ರೇನ್ ಸಂಸದೆ ಸೋಫಿಯಾ ಫೆಡಿನಾ ಅವರು ಔಷಧೀಯ ನೆರವನ್ನು ಕೇಳಿದ್ದಾರೆ.

‘ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಜೊತೆಗೆ ಮಾನಸಿಕ ಶಕ್ತಿಯ ನೆರವು ಬೇಕಾಗುತ್ತದೆ. ಮಾಸ್ಕೋದಿಂದ ನಮ್ಮ ಮೇಲೆ ದಾಳಿ ಮಾಡಿಸಿದ ವ್ಯಕ್ತಿಗೆ ಶಿಕ್ಷೆಯಾಗಬೇಕು. ಶಾಂತಿಯುತವಾಗಿ ವಾಸಿಸುತ್ತಿರುವ ಉಕ್ರೇನಿಯನ್ನರನ್ನು ಕೊಲ್ಲುತ್ತಿದ್ದಾರೆ. “ಭಾರತದ ರಾಜಕಾರಣಿಗಳು ನಮ್ಮ ದೇಶದ ಜನರ ಮಾನವ ಹಕ್ಕುಗಳನ್ನು ರಕ್ಷಿಸಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಸೋಫಿಯಾ ತಿಳಿಸಿದ್ರು.

ಉಕ್ರೇನ್ ವಿದೇಶಾಂಗ ಸಚಿವ ಮೈತ್ರೊ ಕುಲೇಬಾ ಅವರು ರಷ್ಯಾದ ಸೇನೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೆ, 1941 ರಲ್ಲಿ ನಾಜಿಗಳು ಕೀವ್‌ ಮೇಲೆ ದಾಳಿ ಮಾಡಿದ್ದನ್ನು ನೆನಪಿಸಿಕೊಂಡರು.

ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡ ನಂತರ ರಷ್ಯಾ ಪಡೆಗಳು ಉಕ್ರೇನ್‌ನಲ್ಲಿ ಅಧಿಕಾರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ  ಹೇಳಿದ್ದಾರೆ.

Share Post