International

UKRAIN-RUSSIA WAR: ನಾಗರಿಕರು ನಮ್ಮ ಟಾರ್ಗೆಟ್‌ ಅಲ್ಲ; ರಷ್ಯಾ ಮಿಲಿಟರಿಯಿಂದ ಮಾಧ್ಯಮ ಹೇಳಿಕೆ

ಮಾಸ್ಕೋ: ರಷ್ಯಾ ಮಿಲಿಟರಿ ಪಡೆ ಉಕ್ರೇನ್‌ನ ಐದು ಪ್ರಮುಖ ನಗರಗಳನ್ನು ಟಾರ್ಗೆಟ್‌ ಮಾಡಿದೆ. ಮೌರಿಪೌಲ್‌, ಒಡೆಸ್ಸಾ, ಕ್ರಾಮಟೋರ್ಸ್ಕ್‌, ಕೀವ್‌ ಹಾಗೂ ಕಾರ್ಕೀವ್‌ ನಗರಗಳ ಮೇಲೆ ಅಟ್ಯಾಕ್‌ ಮಾಡುತ್ತಿದೆ. ಇಲ್ಲಿನ ವಾಯುನೆಲೆ ಹಾಗೂ ಮಿಲಿಟರಿ ಸ್ವತ್ತುಗಳ ಮೇಲೆ ದಾಳಿ ನಡೆಸಿದೆ. ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗುತ್ತಿದೆ.

ಇನ್ನು ಈ ಬಗ್ಗೆ ಉಕ್ರೇನ್‌ ಮಿಲಿಟರಿ ಪಡೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಉಕ್ರೇನ್‌ ನಿವಾಸಿಗಳು ನಮ್ಮ ಟಾರ್ಗೆಟ್‌ ಅಲ್ಲವೇ ಅಲ್ಲ. ನಾವು ನಾಗರಿಕರಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಉಕ್ರೇನ್‌ನ ವಾಯುನೆಲೆ ಹಾಗೂ ಮಿಲಿಟರಿ ಸ್ವತ್ತುಗಳನ್ನಷ್ಟೇ ನಾವು ಟಾರ್ಗೆಟ್‌ ಮಾಡಿಕೊಂಡಿದ್ದೇವೆ ಎಂದು ಹೇಳಿದೆ.

 

Share Post