International

ನನ್ನ ದೃಷ್ಟಿಯಲ್ಲಿ ಹಮಾಸ್‌ನ ಪ್ರತಿಯೊಬ್ಬನೂ ಸತ್ತ ವ್ಯಕ್ತಿ; ಇಸ್ರೇಲ್‌ ಪ್ರಧಾನಿ

ನನ್ನ ದೃಷ್ಟಿಯಲ್ಲಿ ಹಮಾಸ್‌ನ ಪ್ರತಿಯೊಬ್ಬ ಸದಸ್ಯ ಸತ್ತ ವ್ಯಕ್ತಿ ಎಂದು  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ. ಇಸ್ರೇಲಿನಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದ ಮೇಲೆ ಸರ್ಕಾರದ ಮೊದಲ ಸಭೆಯ ನಂತರ ಪ್ರಧಾನಿ ನೆತನ್ಯಾಹು ಈ ರೀತಿಯಾಗಿ ಹೇಳಿಕೆ ಕೊಟ್ಟಿದ್ದಾರೆ.

ಹಮಾಸ್ ಮತ್ತು ಇಸ್ರೇಲ್ ನಡುವೆ ಕೆಲವು ದಿನಗಳಿಂದ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಗಾಜಾದಲ್ಲಿ 1,100 ಮತ್ತು ಇಸ್ರೇಲ್‌ನಲ್ಲಿ 1,200 ನಾಗರಿಕರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ನೆತನ್ಯಾಹು ಅವರಿಗೆ ಯುದ್ಧ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅವರು ಜಿನೀವಾ ಒಪ್ಪಂದಗಳಿಗೆ ಬದ್ಧವಾಗಿರಲು ಬಯಸುತ್ತಾರೆ ಎಂದು ಹೇಳಿದರು.

Share Post