HealthInternational

ಚೀನಾದಲ್ಲಿ ಕೊರೊನಾ ರುದ್ರನರ್ತನ; ಭಾರತಕ್ಕೂ ಭೀತಿ

ಬೀಜಿಂಗ್; ವಿಶ್ವಕ್ಕೆಲ್ಲಾ ಕೊರೊನಾ ಹರಡಿದ್ದ ಚೀನಾ ಈಗ ಸಂಕಷ್ಟಲ್ಲಿ ಸಿಲುಕಿದೆ. ಒಮ್ಮೆಗೆ ಚೀನಾದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ತುಂಬಿ ತುಳುಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನೂರಾರು ಜನರು ಬೀದಿಯಲ್ಲೇ ಸಾವನ್ನಪ್ಪುತ್ತಿದ್ದಾರೆ.

ಸ್ಮಶಾನಗಳಲ್ಲಿ ಹೆಣ ದಪನ್ ಮಾಡೋದಕ್ಕೂ ಜಾಗವಿಲ್ಲದಂತಾಗಿದೆ. ಒಂದು ಸ್ಮಶಾನಕ್ಕೆ ದಿನಕ್ಕೆ ಕನಿಷ್ಠ ಇನ್ನೂರು ಶವಗಳು ಬರುತ್ತಿವೆ. ಕೊರೋನಾವನ್ನು ಕಂಟ್ರೋಲ್ ಮಾಡಲಾಗದೆ ಚೀನಾ ಪರದಾಡುತ್ತಿದೆ.

ಇನ್ನು ಚೀನಾದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಭಾರತದಲ್ಲೂ ಭೀತಿ ಹೆಚ್ಚಾಗಿದೆ. ಹೀಗಾಗಿ ಇಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 

Share Post