National

ರಷ್ಯಾ-ಉಕ್ರೇನ್‌ ನಡುವೆ ಯುದ್ಧ: ಕುಸಿದು ಬಿದ್ದ ಭಾರತದ ಆರ್ಥಿಕತೆ

ದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದ ಪರಿಣಾಮ ಭಾರತದ  ಷೇರುಪೇಟೆ ಕುಸಿತ ಕಂಡಿದೆ.  ಸೆನ್ಸೆಕ್ಸ್ 1800 ಅಂಕಗಳಿಗೆ ಕುಸಿದು  55,500 ಕ್ಕಿಂತ ಕಡಿಮೆಯಾಗಿದೆ. ನಿಫ್ಟಿ ಸೂಚ್ಯಾಂಕ 500 ಅಂಕಗಳಿಗೆ ಕುಸಿದಿದೆ. ಇದರಿಂದ ಭಾರತದಲ್ಲಿ ಕೋಟ್ಯಂತರ ರೂಪಾಯಿ ಸಂಪತ್ತು ನಷ್ಟವಾಗಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ದೇಶೀಯ ಷೇರು ಮಾರುಕಟ್ಟೆ ಕೆಳಗಿಳಿದಿದೆ. ಮಾರುಕಟ್ಟೆಯಲ್ಲಿ ಆಲ್‌ರೌಂಡ್ ಮಾರಾಟ ನಡೆಯುತ್ತಿವೆ. ಆರಂಭಿಕ ಹಂತದಲ್ಲಿಯೇ ಸೆನ್ಸೆಕ್ಸ್ ಶೇಕಡಾ 3 ರಷ್ಟು ಕುಸಿದುಬಿದ್ದಿದೆ.   . ಐಸಿಐಸಿಐ ಬ್ಯಾಂಕ್‌ನ ಷೇರುಗಳು ಶೇ 4ರಷ್ಟು ಕುಸಿದಿವೆ. ಎಲ್ಲಾ ವಲಯಗಳ ಸೂಚ್ಯಂಕಗಳು ರೆಡ್ ಮಾರ್ಕ್‌ನಲ್ಲಿ ಗೋಚರವಾಗುತ್ತಿವೆ.

ದೇಶಿಯ ಷೇರು ಮಾರುಕಟ್ಟೆ ಆರಂಭಿಕ ಹಂತದಲ್ಲಿಯೇ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದೆ. ಸೆನ್ಸೆಕ್ಸ್ 1813 ಅಂಕಗಳ ಭಾರೀ ಕುಸಿತದೊಂದಿಗೆ 55,418ಕ್ಕೆ ಆರಂಭವಾಗಿದೆ. ನಿಫ್ಟಿ 514 ಅಂಕಗಳ ಕುಸಿತದೊಂದಿಗೆ 16,548ರಿಂದ ಪ್ರಾರಂಭವಾಗಿದೆ.

ಆಲ್ ರೌಂಡ್ ಮಾರಾಟ ಭೀತಿಯ ಕಾರಣ ಷೇರುಪೇಟೆ ರೆಡ್ ಮಾರ್ಕ್ ನಲ್ಲಿ ಕಾಣಿಸಿಕೊಂಡಿದೆ. ನಿಫ್ಟಿ ಷೇರುಗಳು 50ರಷ್ಟು ಕುಸಿತದೊಂದಿಗೆ ವಹಿವಾಟಾಗುತ್ತಿವೆ. ಬ್ಯಾಂಕ್ ನಿಫ್ಟಿ ಶೇ.2.69ರಷ್ಟು ಇಳಿಕೆಯಾಗಿ 1000 ಅಂಕಗಳ ಕುಸಿತದೊಂದಿಗೆ 36422ರಲ್ಲಿ ವಹಿವಾಟು ನಡೆಸುತ್ತಿದೆ. ಬ್ಯಾಂಕ್ ನಿಫ್ಟಿಯಲ್ಲಿ ಒಟ್ಟು 12 ಷೇರುಗಳು ನಷ್ಟದಲ್ಲಿ ವಹಿವಾಟಾಗುತ್ತಿವೆ.

Share Post