MURDER IN BANGALORE: ಅತ್ತೆ, ಪತ್ನಿಯನ್ನು ಕೊಲೆಗೈದ ಪಾಪಿ ಪತಿ
ಬೆಂಗಳೂರು; ಕೌಟುಂಬಿಕ ಕಲಹದ ಹಿನ್ನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಲಪಾಳ್ಯದಲ್ಲಿ ನಡೆದಿದೆ. ಕಳೆದ ರಾತ್ರಿ ಈ ಕೃತ ಎಸಗಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಅತ್ತೆ ಸರೋಜಮ್ಮ ಹಾಗೂ ಅವರ ಮಗಳು ಸಾವಿತ್ರಿ ಕೊಲೆಯಾದವರು. ಕೆಲ ವರ್ಷಗಳ ಹಿಂದೆ ರವಿಕುಮಾರ್ ಜೊತೆ ಸಾವಿತ್ರಿ ಮದುವೆಯಾಗಿತ್ತು. ಆದ್ರೆ ಇಬ್ಬರ ನಡುವೆ ಕೌಟುಂಬಿಕ ಕಲಹ ಇತ್ತು. ಇದೇ ಕಾರಣಕ್ಕೆ ಕಳೆದ ರಾತ್ರಿಯೂ ದೊಡ್ಡ ಜಗಳವಾಗಿದೆ. ಈ ವೇಳೆ ರವಿಕುಮಾರ್ ಮಾರಕಾಸ್ತ್ರದಿಂದ ಪತ್ನಿ ಸಾವಿತ್ರಿಯನ್ನು ಕೊಲೆ ಮಾಡಿದ್ದಾನೆ. ಬಿಡಸಲು ಬಂದ ಆಕೆಯ ತಾಯಿ ಸರೋಜಮ್ಮನನ್ನೂ ಆತ ಕೊಲೆ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೋರ್ಟ್ಗೆ ಹಾಜರುಪಡಿಸಿದ್ದಾರೆ.