BengaluruPolitics

ದೇಶ ಆಳುವ ಅರ್ಹತೆ ಬಿಜೆಪಿಗೆ ಇಲ್ಲವೇ ಇಲ್ಲ; ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಬಿಜೆಪಿ ಪಕ್ಷಕ್ಕೆ ದೇಶ ಆಳುವ ಅರ್ಹತೆ ಇಲ್ಲವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಕೊಡುಗೆ ಏನೇನೂ ಇಲ್ಲ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಒಬ್ಬ ನಾಯಕನಾದರೂ ಜೈಲಿಗೆ ಹೋಗಿದ್ದಾರಾ ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, ಅವರು ನೆಹರೂ ಅವರನ್ನು ಟೀಕೆ ಮಾಡುವುದೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಬಿಜೆಪಿಯವರು  ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರೋಧಿಗಳು. ನನ್ನ ಪ್ರಕಾರ ಅವರಿಗೆ ದೇಶ ಆಳುವುದಕ್ಕೆ ಅರ್ಹತೆಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್.​ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಅದಕ್ಕೆ ನಾನು ಉತ್ತರ ಕೊಡೋದಿಲ್ಲ. ಯಾಕಂದ್ರೆ ಕುಮಾರಸ್ವಾಮಿಯವರು ಸುಳ್ಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಅವರು ಹೇಳೋದೆಲ್ಲಾ ಬರೀ ಸುಳ್ಳೇ ಎಂದು ಹೇಳಿದ್ದಾರೆ.

 

Share Post