Bengaluru

ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದು ಇತಿಹಾಸದಲ್ಲಿಲ್ಲ-ಆರ್.ಅಶೋಕ್‌

ಬೆಂಗಳೂರು: ವಿಧಾಬಸಭೆ ಕಲಾಪದಲ್ಲಿ ಕಾಂಗ್ರೆಸ್‌ ನಾಯಕರು ರಾಷ್ಟ್ರಧ್ವಜ ಹಿಡಿದಯ ಪ್ರತಿಭಟನೆ ಮಾಡಿದ್ದಕ್ಕೆ ಕಂದೈ ಸಚಿವ ಆರ್.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನವರಿಹೆ ಮತಿ ಭ್ರಮಣೆಯಾಗಿದೆ ಅದಕ್ಕೆ ಹೀಗೆಲ್ಲಾ ಮಾಡ್ತಿದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಈಶ್ವರಪ್ಪನವರ ಆರೋಪಗಳನ್ನು ಮಾಡ್ತಿದ್ದೀರಲ್ಲ..ಧ್ವಜದ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋದಾಗ ನಮ್ಮನ್ನೆಲ್ಲಾ ಹೊಡೆದು ಬಡಿದು ಜೈಲಿಗೆ ಹಾಕಿದ್ರು. ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಪಾಕ್‌ ಧ್ವಜ ಹಾರಿದಾಗ ಅಲ್ಲಿಂದ ಉಗ್ರರನ್ನು ಓಡಿಸಿ ನಮ್ಮ ಭಾರತ ಧ್ವಜವನ್ನು ಹಾರಿಸಿದ್ದು ಇದೇ ಈಶ್ವರಪ್ಪನವರ ತಂಡ. ಕತ್ತೆಗೇನು ಗೊತ್ತು ಕಸ್ತೂರಿ ವಾಸನ ಎಂಬಂತೆ ಈಶ್ವರಪ್ಪನವರ ಬಗ್ಗೆ ಇಂತಹ ಹೇಳಿಕೆ ನೀಡೋಕೆ ನಾಚಿಕೆ ಆಘಬೇಕು ಅವರಿಗೆ.

ದೇಶದ ಕಾನೂನಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಸಂವಿಧಾನವನ್ನು ಪಕ್ಕಕ್ಕೆ ಸರಿಸುವ ಜನ ಇಂದು ಧ್ವಜ ಹಿಡಿದಿದ್ದಾರೆ. ಕಾಂಗ್ರೆಸ್‌ನ ನಕಲಿ ನಾಟಕ, ನಕಲಿ ಪ್ರೀತಿಯನ್ನು ತೋರಿಸಿದ್ದಾರೆ. ಅವರ ಈ ನಾಟಕಕ್ಕೆ ಜನ ಒಪ್ಪಲ್ಲ. ಧ್ವಜ ಹಿಡಿಯದೇ ಇರುವವರ ಕೈಯಲ್ಲಿ ಇಂದು ಈಶ್ವರಪ್ಪನವರು ರಾಷ್ಟ್ರಧ್ವಜ ಹಿಡಿಯುವಂತೆ ಮಾಡಿದ್ದಾರೆ. ಇವರ ಮತೀಯ ಧೋರಣೆಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಸಚಿವ ಅಶೋಕ್‌ ಕಿಡಿ ಕಾರಿದ್ದಾರೆ.

Share Post