ಶೀಘ್ರವಾಗಿ ಉಕ್ರೇನ್ ದೇಶ ತೊರೆಯುವಂತೆ ಭಾರತೀಯರಿಗೆ ಸೂಚನೆ
ಕೈವ್ (ಉಕ್ರೇನ್) : ರಷ್ಯಾ ಮತ್ತು ಉಕ್ರೇನ್ ನಡುವೆ ಎಲ್ಲವೂ ಸರಿಯಿಲ್ಲ. ಯುದ್ಧದ ಭೀತಿಯಲ್ಲಿದೆ ಉಕ್ರೇನ್. ಈ ಕಾರಣದಿಂದ ಉಕ್ರೇನ್‌ನಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತಿಳಿಸಿದೆ.
Embassy of India in Kyiv asks Indians, particularly students whose stay is not essential, to leave Ukraine temporarily in view of uncertainties of the current situation pic.twitter.com/U15EoGu89g
— ANI (@ANI) February 15, 2022
ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು, ವಿಶೇಷವಾಗಿ ವಾಸ್ತವ್ಯದ ಅಗತ್ಯವಿಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದೇಶ ತೊರೆಯಬೇಕು. ಅನಿವಾರ್ಯವಿಲ್ಲದಿದ್ದರೆ ಉಕ್ರೇನ್ ಪ್ರವಾಸವನ್ನು ರದ್ದುಗೊಳಿಸಲು ಕೂಡ ಸೂಚಿಸಿದೆ.
ಉಕ್ರೇನ್‌ನಲ್ಲಿರುವ ಭಾರತೀಯರು ತಕ್ಷಣ ತಮ್ಮ ಸ್ಥಿತಿಗತಿಗಳ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ಪೂರೈಸಬೇಕು. ಭಾರತೀಯರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ರಾಯಭಾರ ಕಚೇರಿಯು ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.