Hijab Row: ಕಾಫಿನಾಡಿನಲ್ಲಿ ಇಂದಾವರ ಅಲ್ಪಸಂಖ್ಯಾತರ ಶಾಲೆಗೆ ರಜೆ ಘೋಷಣೆ
ಚಿಕ್ಕಮಗಳೂರು: ಹಿಜಾಬ್ ವಿವಾದ ನ್ಯಾಯಾಲಯದಲ್ಲಿದ್ದರೂ ಕೂಡ ಸಂಘರ್ಷ ಮುಗಿಯುತ್ತಿಲ್ಲ. ಕೋರ್ಟ್‌ನ ಮಧ್ಯಂತರ ಆದೇಶಕ್ಕೆ ರಾಜ್ಯದಲ್ಲಿ ಕೆಲ ಪೋಷಕರು ಮತ್ತು ವಿದ್ಯಾರ್ಥಿಗಳು ಕವಡೆ ಕಾಸಿನ ಕಿಮ್ಮತ್ತು ನೀಡ್ತಿಲ್ಲ. ಕೋರ್ಟ್ ಧಾರ್ಮಿಕ ಸಂಕೇತಗಳನ್ನು ಧರಿಸದಂತೆ ಸೂಚಿಸಿದರೂ ಕೂಡ ಕಾನೂನಿನ ವಿರುದ್ಧವೇ ಸಮರ ಸಾರಿದ್ದಾರೆ. ಹಿಜಾಬ್ ಧರಿಸಿಯೇ ಶಾಲೆಗೆ ಬರುತ್ತಿದ್ದಾರೆ. ಶಾಲೆ ಬೇಕಾದ್ರೆ ಬಿಡ್ತೇವೆ..ಹಿಜಾಬ್ ಬಿಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಇಂದಾವರ ಅಲ್ಪಸಂಖ್ಯಾತರ ಸರ್ಕಾರಿ ಫ್ರೌಢ ಶಾಲೆಗೆ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದ್ದಾರೆ. ಶಾಲೆಯಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಹಿನ್ನೆಲೆ ರಜೆ ಘೋಷಿಸಿದ್ದಾರೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ವಾಗ್ವಾದ ನಡೆದಿದೆ. ಜೊತೆಗೆ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ಹಿಂದೇಟು ಹಾಕುತ್ತಿದ್ದಂತೆ ಕ್ಯಾಂಪಸ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಕೇಸರಿ ಶಾಲು ತೆಗೆದಿದ್ದಾನೆ. ಪರಿಸ್ಥಿತಿ ಹತೋಟಿಗೆ ತರಲು ಡಿಡಿಪಿಐ ಮಲ್ಲೇಶಪ್ಪ ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ.
ಶಾಲೆಗೆ ರಜೆ ನೀಡಿದರೂ ಕ್ಯಾಂಪಸ್‌ನಿಂದ ಹೊರ ಹೋಗಿಲ್ಲ..ಮೈದಾನದಲ್ಲಿಯೇ ಧರಣಿ ಕುಳಿತಿದ್ದಾರೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ ನಡೆದಿದೆ.