ಮದುವೆ ಆದ ಕೆಲವೇ ಕ್ಷಣಗಳಲ್ಲಿ ಪ್ರಿಯಕರನ ಜೊತೆ ವಧು ಎಸ್ಕೇಪ್
ದಾಂತೇವಾಡ: ಆಗಿನ್ನೂ ಮಾದುವೆಯಾಗಿತ್ತು. ವಧು-ವರರು ಇನ್ನೂ ಮನೆಯ ದಾರಿಯಲ್ಲಿದ್ದರು. ಆಗಲೇ ಆಘಾತವೊಂದು ಕಾದಿತ್ತು. ಅದ್ರಲ್ಲೂ ತಾಳಿ ಕಟ್ಟಿದ ವರನಿಗೆ ದೊಡ್ಡ ಆಘಾತವೇ ಆಗಿತ್ತು. ಯಾಕಂದ್ರೆ ತಾಳಿ ಕಟ್ಟಿಸಿಕೊಂಡ ವಧು ಸ್ವಲ್ಪ ಸಮಯದಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದಳು. ಈ ಘಟನೆ ನಡೆದಿರೋದು ಛತ್ತಿಸ್ಗಢದ ದಾಂತೇವಾಡದಲ್ಲಿ.
ಮದುವೆಯ ನಂತರ ಕಲ್ಯಾಣ ಮಂಟಪದಿಂದ ವರನ ಮನೆಗೆ ಹೋಗಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲೇ ವಧು, ಚಾಣಾಕ್ಷತಣ ತೋರಿಸಿ ಎಸ್ಕೇಪ್ ಆಗಿದ್ದಾಳೆ. ಮಾರ್ಗ ಮಧ್ಯೆ ವಧು ಶೌಚಾಲಯಕ್ಕೆ ಹೋಗಬೇಕು ಎಂದಿದ್ದಾಳೆ. ಕಾರು ನಿಲ್ಲಿಸಿದಾಗ, ಆಕೆ ಕೆಳಗಿಳಿದವಳು, ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ.
ಎಷ್ಟು ಹೊತ್ತಾದರೂ ವಧು ಬರದಿದ್ದನ್ನು ನೋಡಿ ವರ ಕಂಗಾಳಾಗಿದ್ದಾರೆ. ಎಷ್ಟು ಹುಡುಕಾಡಿದರೂ ಸಿಕ್ಕಿಲ್ಲ. ಹೀಗಾಗಿ ವರನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗಿ, ವಧು ತನ್ನ ಪ್ರತಿಕರನ ಜೊತೆ ಪರಾರಿಯಾಗಿರುವುದು ಗೊತ್ತಾಗಿದೆ.