National

ಮೋದಿ ಚುನಾವಣಾ ರ್ಯಾಲಿಗೆ ಈ ಬಾರಿಯೂ ರೈತರ ಪ್ರತಿಭಟನೆ ತಪ್ಪಿದ್ದಲ್ಲ-ರವನೀತ್‌ ಸಿಂಗ್‌ ಬಿಟ್ಟು

ಪಂಜಾಬ್:‌ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಪಂಜಾಬ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 14, 16 ಮತ್ತು 17 ರಂದು ಪಂಜಾಬ್ ಪ್ರವಾಸ ಕೈಗೊಳ್ಳಲು ಮೋದಿ ಸಜ್ಜಾಗಿದ್ದಾರೆ. ಮಾಲ್ವಾ, ದೋಬಾ ಮತ್ತು ಮಜಾದಲ್ಲಿ ಅವರು ಪ್ರಚಾರ ನಡೆಸಲಿದ್ದಾರೆ. ಫೆಬ್ರವರಿ 14 ರಂದು ಜಲಂಧರ್, ಫೆಬ್ರವರಿ 16 ರಂದು ಪಠಾಣ್‌ಕೋಟ್ ಮತ್ತು ಫೆಬ್ರವರಿ 17 ರಂದು ಅಬೋಹರ್‌ನಲ್ಲಿ ಮೋದಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ ಇವರ ರ್ಯಾಲಿಗೆ ಅಡ್ಡಿಯುಂಟುಮಾಡಲು ರೈತರು ಯೋಜನೆ ರೂಪಿಸಿರುವುದಾಗಿ ಕಾಂಗ್ರೆಸ್‌ ಸಂಸದ ತಿಳಿಸಿದ್ದಾರೆ.

ಸಂಸದ ರವನೀತ್ ಸಿಂಗ್ ಬಿಟ್ಟು ಪ್ರಧಾನಿ ಮೋದಿಯವರು ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ಪಂಜಾಭ್‌ಗೆ ಭೇಟಿ ನೀಡುವುದು ಉತ್ತಮ. ರಸ್ತೆ ಮಾರ್ಗವಾಗಿ ಸಂಚರಿಸುವುದರಿಂದ ಸಮಸ್ಯೆ ಖಂಡಿತ ಎದುರಾಗಲಿದೆ. ರಾಜ್ಯದ ಜನತೆ ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ಹೋರಾಟ ಮಾಡಿದ್ದನ್ನು ಮರೆತಿಲ್ಲ.   ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ರು. ಅದರ ಸೇಡನ್ನು ತೀರಿಸಿಕೊಂಡೇ ತೀರುತ್ತಾರೆ. ಹಾಗಾಗಿ ಮೋದಿ ಹೆಲಿಕಾಪ್ಟರ್‌ ಪ್ರಯಾಣ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಪಂಜಾಬ್‌ನ  ಫಿರೋಜ್‌ಪುರಕ್ಕೆ ತೆರಳುತ್ತಿದ್ದಾಗ ರೈತರು ರಸ್ತೆ ತಡೆ ಪ್ರತಿಭಟನೆ ನಡೆಸಿದ್ರು. ಇದರಿಂದ ಮೋದಿ ಕಾನ್ವಾಯ್‌  15 ರಿಂದ 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದರು. ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ. ಭದ್ರತೆಯಲ್ಲಿನ ಪ್ರಮುಖ ಲೋಪವನ್ನು ಗೃಹ ಸಚಿವಾಲಯ ಬಹಿರಂಗಪಡಿಸಿದೆ. ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ಪ್ರತ್ಯೇಕ ತನಿಖೆ ಆರಂಭಿಸಿವೆ.

ಪಂಜಾಬ್‌ನ ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್ ಮತ್ತು ಗೃಹ ಕಾರ್ಯದರ್ಶಿ ಅನುರಾಗ್ ವರ್ಮಾ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಕೇಂದ್ರವು ಇಂಟೆಲಿಜೆನ್ಸ್ ಬ್ಯೂರೋ, ಎಸ್‌ಪಿಜಿ ಅಧಿಕಾರಿಗಳು ಮತ್ತು ರಕ್ಷಣಾ ಕಾರ್ಯದರ್ಶಿ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನು ರಚಿಸಿದೆ. ಕೇಂದ್ರ ಈಗಾಗಲೇ ತನಿಖೆ ಆರಂಭಿಸಿದೆ. ಇದರ ನಡುವೆ ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಐದು ರಾಜ್ಯಗಳ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವಾಕಾಂಕ್ಷೆಯಾಗಿ ಪರಿಣಮಿಸಿದೆ. ಪಂಜಾಬ್ ರಾಜ್ಯದಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎಂಬುದು ತಿಳಿದಿರುವ ಸಂಗತಿ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸರ್ಕಾರದ ಪರವಾಗಿ ಮತ ಹಾಕುವ ಸಾಧ್ಯತೆಗಳು ತೀರಾ ವಿರಳ. ಎಎಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

Share Post