ಬಿಎಸ್‌ಎಫ್ ಬಲೆಗೆ ಬಿದ್ಧ ಇಬ್ಬರು ಡ್ರಗ್ ಪೆಡ್ಲರ್‌ಗಳು: 6.52ಕೋಟಿ ಮೌಲ್ಯದ ಮಾಲ್ ವಶಕ್ಕೆ
ಮ್ಯಾನ್ಮಾರ್: ಬಿಎಸ್‌ಎಫ್(BSF) ಯೋಧರು ಬಹುದೊಡ್ಡ ಜಾಲಕ್ಕೆ ಬಲೆ ಬೀಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಇಬ್ಬರು ಡ್ರಗ್ ಪೆಡ್ಲರ್‌ಗಳಿಂದ ಕೋಟಿ ಕೋಟಿ ಬೆಲೆ ಬಾಳುವ ಡ್ರಗ್ ವಶಪಡಿಸಿಕೊಂಡಿದ್ದಾರೆ. ಬಿಎಸ್ಎಫ್ 38 ಬೆಟಾಲಿಯನ್, ಅಬಕಾರಿ ಮತ್ತು ಮಾದಕ ದ್ರವ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆ ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಸುಮಾರು 12.8 ಕೆಜಿ ತೂಕದ 6.52 ಕೋಟಿ ಮೌಲ್ಯದ 1,30,492 ಯಾಬಾ(Yaba) ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಮತ್ತು ಮ್ಯಾನ್ಮಾರ್ ಪ್ರಜೆ ಸೇರಿದಂತೆ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದೆ.
ಕೊಲಾಸಿಬ್ ಜಿಲ್ಲೆಯ ಚಿಮ್ಮುಲ್ಲಾಂಗ್ ಗ್ರಾಮದಲ್ಲಿ ಮಾಲ್ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಮಧ್ಯಾಹ್ನ 3ಗಂಟೆ10ನಿಮಿಷಕ್ಕೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ಇಲಾಖೆಗಳು ತಂಡಗಳಾಗಿ ಬೇರ್ಪಟ್ಟು ಸ್ಮಗ್ಲರ್‌ಗಳ ಚಹರೆಯ ಮೇಲೆ ಗಮನ ಹರಿಸಿದ್ದರು. ಆರೋಪಿಗಳನ್ನು ಸಮೀರ್ ದೇಬ್(49) ಹಾಗೂ ರಾಬೀಂದ್ರ ದೇಬ್ ಎಂದು ಗುರತಿಸಲಾಗಿದೆ.
BSF 38 battalion and Excise and Narcotics Department seized 1,30,492 Yaba tablets weighing about 12.8 kg and worth over Rs 6.52 crores and apprehended two drug peddlers, including a Myanmar national, in Mizoram’s Kolasib district yesterday. pic.twitter.com/IPpNZmYx2L
— ANI (@ANI) February 12, 2022