ಕೊರೊನಾ ಇಳಿಮುಖ: ಬೆಂಗಳೂರು ʻಕರಗʼ ನಡೆಸಲು ಬಿಬಿಎಂಪಿ ಅನುಮತಿ
ಬೆಂಗಳೂರು: ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಕೊನೆಗೂ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ. ಮಹಾಮಾರಿ ಕೊರೊನಾ ಕಾರಣದಿಂದಾಗಿ ಸತತ ಎರಡು ವರ್ಷಗಳಿಂದ ದ್ರೌಪದಮ್ಮ ಕರಗ ನಿಂತು ಹೋಗಿತ್ತು ಇದೀಗ ಸಮತಿ ಮನವಿ ಮೇರೆಗೆ ಕೆಲವು ಷರತ್ತುಗಳ್ನು ವಿಧಿಸಿ ಕರಗ ನಡೆಸಲು ಬಿಬಿಎಂಪಿನ ಅನುಮತಿ ನೀಡಿದೆ.
ಕೊರೊನಾ ಕಡಿಮೆಯಾದ ಕಾರಣದಿಂದಾಗಿ ಕರಗ ಉತ್ಸವ ನಡೆಸಲು ಅನುಮತಿ ಕೋರಿ ಕರಗ ಉತ್ಸವ ಸಮಿತಿಯ ಅಧ್ಯಕ್ಷ ಪಿ.ಆರ್.ರಮೇಶ್ ಪಾಲಿಕೆ ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ರು. ಇವರ ಮನವಿಗೆ ಬೆಂಗಳೂರು ಮಹಾನಗರ ಪಾಲಿಕೆ ಮೌಖಿಕವಾಗಿ ಸಮಮ್ತಿ ಸೂಚಿಸಿದ್ದು ಕೆಲವು ಷರತ್ತುಗಳನ್ನು ಕೂಡ ವಿಧಿಸಿದೆ. ಸುಮಾರು 800ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದ ಕರಗ ಉತ್ಸವವನ್ನ ನಿಲ್ಲಿಸುವುದು ಬೇಡ. ಈ ಉತ್ಸವಕ್ಕೆ ಶತಶತಮಾನಗಳ ಇತಿಹಾಸವಿದೆ. ಕೆಂಪೇಗೌಡರ ಕಾಲದಿಂದಲೂ ಈ ಆಚರಣೆ ಇದೆ ಎನ್ನಲಾಗಿದೆ. ಉತ್ಸವಕ್ಕೆ ಬಿಬಿಎಂಪಿಯ ಒಂದೂವರೆ ಕೋಟಿ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ. ಎರಡು ವರ್ಷಗಳಿಂದ ಉತ್ಸವಕ್ಕೆ ಬ್ರೇಕ್ ಬಿದ್ದಿದ್ದರಿಂದ ಈ ಬಾರಿ ಮಾರ್ಚ್ 8 ನಡೆಯುವ ಉತ್ಸವದಲ್ಲಿ ದೇಶ ವಿದೇಶಗಳಿಂದ ಭಕ್ತರು ಬರುವ ಸಾಧ್ಯತೆಯಿದೆ. ಸುಮಾರು 50ಸಾವಿರಕ್ಕೂ ಹೆಚ್ಚು ಜನ ಕರಗದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಉತ್ಸವಕ್ಕೆ ಅನುಮತಿ ನೀಡುತ್ತಿದ್ದಂತೆ ತಿಗಳರ ಪೇಟೆಯಲ್ಲಿ ಸಂತಸ ಮನೆ ಮಾಡಿದೆ. ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಸ್ಥಾನದಲ್ಲಿ ಸಿದ್ಧತೆಗಳು ಶುರುವಾಗಿವೆ. ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಡಗರವೋ ಸಡಗರ ದೇವಸ್ಥಾನದ ಅಡಳಿತ ಮಂಡಳಿ ಉತ್ಸವಕ್ಕೆ ಸಿದ್ದತೆ ನಡೆಸುತ್ತಿದೆ. ದೇವಸ್ಥಾನ್ಕೆ ಸುಣ್ಣ, ಬಣ್ಣ ಬಳಿಯಲಾಗುತ್ತಿದೆ. 7 ಬಾರಿ ಕರಗ ಹೊತ್ತ ಜ್ನಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ.