National

Exclusive;ಹೈಕೋರ್ಟ್ ಮಧ್ಯಂತರ ಆದೇಶ ತಡೆ ಕೋರಿ ಸುಪ್ರೀಂಗೆ ಅರ್ಜಿ

ನವದೆಹಲಿ: ಹಿಜಾಬ್ ವಿಚಾರ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಮಧ್ಯಂತರ ರದ್ದು ಮಾಡಬೇಕೆಂದು ಸಂಘಟನೆಯೊಂದು ಮೇಲ್ಮನವಿ ಸಲ್ಲಿಸಿದೆ.

ಹಿಜಾಬ್ ವಿಚಾರವಾಗಿ ನಿನ್ನೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ತೀರ್ಪು ನೀಡುವವರೆಗೂ ಕಾಲೇಜಿಗೆ ಯಾರೂ ಧಾರ್ಮಿಕ ಸಂಕೇತಗಳೊಂದಿಗೆ ಬರಬಾರದು ಎಂದು ಮೌಖಿಕ ಆದೇಶ ನೀಡಿತ್ತು.

ಹೀಗಾಗಿ ಹಿಜಾಬ್ ಧರಿಸದೇ ಕಾಲೇಜಿಗೆ ಹೋಗಲೂ ಸಾಧ್ಯವಿಲ್ಲ. ಈ ಮೌಖಿಕ ಆದೇಶ ನಮ್ಮ ಹಕ್ಕುಗಳಿಗೆ ವಿರುದ್ಧವಾದುದು ಎಂದು ಸುಪ್ರೀಮ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

Share Post