NationalPolitics

ಮೋದಿ ಆಡಳಿತದಲ್ಲಿ ಭಾರತಾಂಬೆ ತಲೆತಗ್ಗಿಸಬೇಕಾಗಿ ಬಂತು; ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ನವದೆಹಲಿ; ಮೋದಿ ಸರ್ಕಾರದ ಅವಧಿಯಲ್ಲಿ ಭಾರತಮಾತೆ ನಾಚಿಕೆಯಿಂದ ತಲೆತಗ್ಗಿಸಬೇಕಾಗಿ ಬಂತು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ, ತಮ್ಮದೇ ಪಕ್ಷದ ಸರ್ಕಾರವನ್ನು ಕಟುವಾಗಿ ಟೀಕೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಭಾರತದ ವಿದೇಶಾಂಗ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ 8 ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಭಾರತ ಮಾತೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿ ಬಂತು. ಏಕೆಂದರೆ ನಾವು ಲಡಾಖ್‌ನಲ್ಲಿ ಚೀನಿಯರ ಎದುರು ತೆವಳಿ ನಡೆದೆವು. ರಷ್ಯನ್ನರ ಮುಂದೆ ಮಂಡಿಯೂರಬೇಕಾಗಿ ಬಂತು. ಕ್ವಾಡ್‌ ಸಭೆಯಲ್ಲಿ ಅಮೆರಿಕನ್ನರ ಮುಂದೆ ‘ಮಿಯಾಂವ್’ ಎನ್ನಬೇಕಾಯಿತು. ಈಗ ಚಿಕ್ಕ ರಾಷ್ಟ್ರ ಕತಾರ್ ಎದುರು ಸಾಷ್ಟಂಗ ನಮಸ್ಕಾರ ಮಾಡಿದ್ದೇವೆ. ನಮ್ಮ ವಿದೇಶಾಂಗ ನೀತಿಯ ಅಧಃಪತನವಾಗಿದೆ ಎಂದು ಸುಬ್ರಮಣಿಯನ್‌ ಸ್ವಾಮಿ ತಮ್ಮ ಟ್ವೀಟ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Share Post