Districts

ಕಾಳಿ ನದಿ ದಂಡೆಯಲ್ಲಿ ಮೊಸಳೆ ದಾಳಿ ಹೆಚ್ಚಳ; ನೀರಿಗೆ ಇಳಿಯದಂತೆ ನಿರ್ಬಂಧ

ಹುಬ್ಬಳ್ಳಿ: ದಾಂಡೇಲಿ ಸುತ್ತಮುತ್ತಲಿನ ಕಾಳಿ ನದಿ ದಂಡೆಯಲ್ಲಿ ಮೊಸಳೆ ಹಾವಳಿ ಹೆಚ್ಚಾಗಿದೆ. ಈ ಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂವರು ಮೊಸಳೆ ದಾಳಿಗೆ ತುತ್ತಾಗಿದ್ದಾರೆ. ದಾಂಡೇಲಿ ಪಟ್ಟಣದ ಮೂಲಕ ಕಾಳಿ ನದಿ ಹಾದುಹೋಗುವುದರಿಂದ ಈ ದುರ್ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಳಿ ನದಿಗೆ ಇಳಿಯದಂತೆ ನಿರ್ಬಂಧ ವಿಧಿಸಲಾಗಿದೆ.

24 ವರ್ಷದ ಹರ್ಷದ್ ಖಾನ್‌ ಇತ್ತೀಚೆಗೆ ದಾಂಡೇಲಿಯಲ್ಲಿ ಮೊಸಳೆ ದಾಳಿಗೆ ಬಲಿಯಾಗಿದ್ದ. ಈಗ ಆ ಯುವಕನ ಮೃತದೇಹವನ್ನು ಮಂಗಳವಾರ ತಡರಾತ್ರಿ ರಕ್ಷಣಾ ತಂಡ ಪತ್ತೆ ಮಾಡಿದೆ. ಮೊಸಳೆ ಯುವಕನ ದೇಹವನ್ನು ಒಂದು ಮೈಲಿ ದೂರಕ್ಕೆ   ಎಳೆದೊಯ್ದಿತ್ತೆಂದು ತಿಳಿದುಬಂದಿದೆ. ಹೀಗಾಗಿ ಅವಶೇಷಗಳನ್ನು ಪತ್ತೆಹಚ್ಚಲು ಎರಡು ದಿನ ಬೇಕಾಯಿತು ಎಂದು ರಕ್ಷಣಾತಂಡದ ಸಿಬ್ಬಂದಿ ತಿಳಿಸಿದ್ದಾರೆ.

ಆಡಳಿತ ಮತ್ತು ಅರಣ್ಯ ಇಲಾಖೆಯು ಮೊಸಳೆ ದಾಳಿಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದು, ಕಾಳಿ ನದಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ. ದಾಂಡೇಲಿಯ ಪ್ರವಾಸಿಗರು ಮತ್ತು ಅನಿವಾಸಿಗಳು ನದಿಗೆ ಹೋಗದಂತೆ ನದಿಯ ಪ್ರವೇಶ ದ್ವಾರಗಳನ್ನು ಮುಚ್ಚಲು ಇಲಾಖೆ ಈಗ ಯೋಜಿಸುತ್ತಿದೆ.

Share Post