CrimeNational

ಪಕ್ಕದ ಮನೆಯವನ ಹೆಂಡತಿ ಮೇಲೆ ಕಣ್ಣಾಕಿದ ಪಾಪಿ-ವಿಡಿಯೋ ಮಾಡಿ ಪತ್ನಿ ದುಷ್ಕೃತ್ಯ

ವಿಜಯವಾಡ: (Vijayavada) ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಬಲವಂತವಾಗಿ ಎಳೆದುತಂದು ಅತ್ಯಾಚಾರ ಮಾಡಿ ವಿಡಿಯೋ ಮಾಡಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ಪತಿ ಅತ್ಯಾಚಾರ ಮಾಡುತ್ತಿರುವ ದೃಶ್ಯವನ್ನು ಆತನ ಪತ್ನಿ ಮೊಬೈಲ್‌ನಲ್ಲಿ ಸೆರೆಹಿಡಿದು ವಿಕೃತಿ ಮೆರೆದಿದ್ದಾಳೆ.

ದಿಲೀಪ್‌ ಮತ್ತು ತುಳಸಿ ಕೃತ್ಯವೆಸಗಿದ ಆರೋಪಿಗಳು(Accused). ಇವರ ಮನೆ ಪಕ್ಕದಲ್ಲಿಯೇ ಸಂತ್ರಸ್ತೆಯು ಮನೆ ಮಾಡಿಕೊಂಡಿದ್ದರು. ಪತಿ ಮತ್ತು ಇಬ್ಬರ ಮಕ್ಕಳ ಸಮೇತ ವಾಸವಾಗಿದ್ದಾರೆ. ಪತಿ ಅಡುಗೆ ಕೆಲಸಕ್ಕೆಂದು ಹೋಗಿ ರಾತ್ರಿ ಮನೆಗೆ ಬಂದಿರಲಿಲ್ಲ. ಈ ವೇಳೆ ಮನೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಸಂತ್ರಸ್ತೆಯನ್ನು ಎಳೆದೊಯ್ದ ದಿಲೀಪ್‌ ಆಕೆಗೆ ಹಿಗ್ಗಾಮುಗ್ಗ ಹೊಡೆದು ಅತ್ಯಾಚಾರ ಮಾಡಿದ್ದಾನೆ. ಈ ದುಷ್ಕೃತ್ಯವನ್ನು ಆರೋಪಿ ಪತ್ನಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾಳೆ.

ಘಟನೆ ಬಳಿಕ ಯಾರಾಗಾದ್ರೂ ವಿಚಾರ ತಿಳಿಸಿದ್ರೆ ನಿನ್ನ ಮತ್ತು ನಿನ್ನ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಆದರೂ ದೃತಿಗೆಡೆದ ಸಂತ್ರಸ್ತೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ(Police) ದೂರು ದಾಖಲು ಮಾಡಿದ್ದಾಳೆ.

Share Post